

ಮೈಸೂರು: ಪತಿಯ ಅಕಾಲಿಕ ನಿಧನದಿಂದ ಬೇಸತ್ತು ಗೃಹಿಣಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ನಗರದ ಜೆ.ಪಿ.ನಗರದಲ್ಲಿ ಭಾನುವಾರ ನಡೆದಿದೆ.
ಚಾಂದಿನಿ(25) ಮೃತ ದುರ್ದೈವಿ. 5 ವರ್ಷಗಳ ಹಿಂದೆ ಚಾಂದಿನಿ ಹಾಗೂ ಮಧುಸೂಧನ್ ವಿವಾಹ ನಡೆದಿತ್ತು. ಬಹಳ ಸಂತೋಷ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಬರಸಿಡಿಲು ಎಂಬಂತೆ 21 ದಿನಗಳ ಹಿಂದೆ ಮಧುಸೂಧನ್ ಮೃತ ಪಟ್ಟಿದ್ದರು.
ಪತಿ ಸಾವಿನ ಬಳಿಕ ಚಾಂದಿನಿಗೆ ಮತ್ತೊಂದು ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ಆದರೆ, ಪತಿಯ ನೆನಪಿನಿಂದ ಹೊರಬರಲಾಗದ ಚಾಂದಿನಿ, ಪೋಷಕರ ನಿರ್ಧಾರಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)