ಸಾವಿನಲ್ಲೂ ಸಾರ್ಥಕತೆ: ಇಬ್ಬರು ದಾನಿಗಳಿಂದ 14 ಮಂದಿಗೆ ಮರುಜೀವ

Organ Donate
Published on

ಮೈಸೂರು: ಅಂಗಾಂಗ ದಾನ ಮಾಡುವ ಮೂಲಕ ಇಬ್ಬರು ದಾನಿಗಳು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇಬ್ಬರು ದಾನಿಗಳಿಂದ 14 ಮಂದಿಗೆ ಮರುಜೀವ ಸಿಕ್ಕಿದೆ.

ಹುಣಸೂರು ಮೂಲದ ಲಾರೆನ್ಸ್(40) ಹಾಗೂ ಕುಶಾಲನಗರ ಮೂಲದ ಶೋಭಾ(48) ಎಂಬುವವರಿಂದ ಅಂಗಾಂಗ ದಾನ ಮಾಡಲಾಗಿದೆ. ಆಗಸ್ಟ್ 16 ರಂದು ಲಾರೆನ್ಸ್​ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಮೆದುಳು ನಿಷ್ಕ್ರಿಯ ಹಿನ್ನೆಲೆ ಕುಟುಂಬಸ್ಥರು ಅಂಗಾಂಗ ದಾನಕ್ಕೆ ನಿರ್ಧಾರ ಮಾಡಿದ್ದಾರೆ.

ಇನ್ನು ಮೆದುಳಿನ ರಕ್ತಸ್ರಾವದಿಂದ ಶೋಭಾ ಬಳಲುತ್ತಿದ್ದರು. ಇಬ್ಬರು ದಾನಿಗಳಿಂದ 4 ಮೂತ್ರಪಿಂಡಗಳು, 2 ಲಿವರ್, 4 ಹೃದಯದ ಕವಾಟ ಹಾಗೂ 4 ಕಾರ್ನಿಯಗಳು ದಾನ ಮಾಡಲಾಗಿದೆ. ಇಬ್ಬರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. (ದಿಗ್ವಿಜಯ ನ್ಯೂಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net