

ಮೈಸೂರು: ಹುಲಿ ದಾಳಿಯಿಂದ ಗಾಯಗೊಂಡ ಮಹದೇವಗೌಡ ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂದು ನಗರದ ಅಪೋಲೋ ಆಸ್ಪತ್ರೆಯ ಕನ್ಸಲ್ಟೆಂಟ್ ಪ್ಲಾಸ್ಟಿಕ್ ಸರ್ಜನ್ ಡಾ. ಸತೀಶ್ ಮಾಹಿತಿ ನೀಡಿದ್ದಾರೆ.
ಮಹದೇವಗೌಡ ಅವರ ಮುಖದ ಮೂಳೆಗಳೆಲ್ಲ ಮುರಿದಿದ್ದವು. ಶಸ್ತ್ರಚಿಕಿತ್ಸೆ ಮೂಲಕ ಅವೆಲ್ಲವನ್ನು ಸರಿ ಮಾಡಲಾಗಿದೆ. ಸದ್ಯ ವೆಂಟಿಲೇಟರ್ ಮೂಲಕ ಉಸಿರಾಟ ನೆಡೆಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅವರ ಸ್ಥಿತಿ ಗಂಭೀರವಾಗಿದೆ. ಬಿಪಿ ಎಲ್ಲವೂ ನಾರ್ಮಲ್ ಇದೆ ಆದರೂ ಈಗಲೇ ಏನು ಹೇಳುಲು ಸಾಧ್ಯವಾಗುವುದಿಲ್ಲ ಎಂದು ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಮೆದುಳಿಗೂ ಸ್ಪಲ್ಪ ಪ್ರಮಾಣದ ಹಾನಿ ಆಗಿದೆ. ಬಲಗಣ್ಣು ಸಂಪೂರ್ಣವಾಗಿ ಹೋಗಿದ್ದು, ಎಡಗಣ್ಣು ಬಹುತೇಕ ಹಾನಿಯಾಗಿದೆ. ಎಡಗಣ್ಣಿನ ದೃಷ್ಟಿ ಉಳಿಸಲು ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.