ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಿಜೆಪಿ ಮುಖಂಡನ ಬರ್ಬರ ಹತ್ಯೆ

BJP leader
Published on

ಮೈಸೂರು: ಬಿಜೆಪಿ ಮುಖಂಡರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕುವೆಂಪುನಗರದ ಶುಕ್ರವಾರ ನಡೆದಿದೆ.

ಆನಂದ್ ಅಲಿಯಾಸ್ ವಡ್ಡ ಆನಂದ್ ಕೊಲೆಯಾದ ಬಿಜೆಪಿ ಮುಖಂಡ. ಈತ ಬಿಜೆಪಿ ನಾಯಕ ಎಚ್.ವಿ.ರಾಜೀವ್ ಬೆಂಬಲಿಗನಾಗಿದ್ದ. ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ನೆಡೆಸುತ್ತಿದ್ದ. ನಿನ್ನೆ ಹುಟ್ಟುಹಬ್ಬ ಆಚರಣೆಯನ್ನೂ ಮಾಡಿಕೊಂಡಿದ್ದ. ಇದೀಗ ಜನತಾ ನಗರದ ಸ್ಮಶಾನ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಮೃತ ಆನಂದ್​ ಕಳೆದ 13 ವರ್ಷಗಳ ಹಿಂದೆ ಕೊಲೆ ಪ್ರಕರಣದ ಅರೋಪಿಯಾಗಿದ್ದ. ಹೀಗಾಗಿ ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆಯನ್ನು ವ್ಯಕ್ತವಾಗಿದೆ. ಕುವೆಂಪು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net