ಅಧಿಕಾರ ವಹಿಸಿಕೊಂಡ ಸಿ.ಡಿ.ಗಂಗಾಧರ: ಮೈಷುಗರ್ ಕಾರ್ಖಾನೆಗೆ ನೂತನ ಅಧ್ಯಕ್ಷ

Mysugar New President mandya
Published on

ಮಂಡ್ಯ: ಮೈಷುಗರ್ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಸಿ.ಡಿ.ಗಂಗಾಧರ ಅಧಿಕಾರ ವಹಿಸಿಕೊಂಡರು.

ನಗರದ ಕಾರ್ಖಾನೆಯ ಆಡಳಿತ ಕಚೇರಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಕಾವೇರಿ ಮಾತೆ ಹಾಗೂ ಕೋಲ್ಮನ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿ ಬಳಿಕ ಅಧಿಕಾರ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ಕಾರ್ಖಾನೆಯ ಉನ್ನತಿಗೆ ಶ್ರಮಿಸಲಾಗುವುದು. ಮೈಸೂರಿನ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿತವಾದ ಕಾರ್ಖಾನೆಗೆ ತನ್ನದೇ ಇತಿಹಾಸ ಇದೆ. ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ ಕಾರ್ಖಾನೆಯ ಗತವೈಭವ ಮರುಕಳಿಸುವಂತೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಚೆಸ್ಕಾಂ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಕಾಂಗ್ರೆಸ್ ಮುಖಂಡರಾದ ವಿಜಯ ರಾಮೇಗೌಡ, ಬಿ.ಎಲ್.ದೇವರಾಜು, ಎಂ.ಪುಟ್ಟೇಗೌಡ, ಹಾಲಹಳ್ಳಿ ರಾಮಲಿಂಗೇಗೌಡ, ರುದ್ರಪ್ಪ, ರಮೇಶ, ನಗರಸಭೆ ಸದಸ್ಯರಾದ ಪೂರ್ಣಿಮಾ, ನಯೀಂ, ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net