ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ರಾಜವಂಶಸ್ಥ ಯದುವೀರ ಬೆಂಬಲ

Mysugar
Published on

ಮೈಸೂರು: ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಫೇಸ್​ಬುಕ್​ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆ ಖಾಸಗೀಕರಣಕ್ಕೆ ಬೆಂಬಲ ನೀಡಿ ಯದುವೀರ ಮಾಡಿರುವ ಫೇಸ್​ಬುಕ್​ ಪೋಸ್ಟ್ ಹೀಗಿದೆ...

ಮಂಡ್ಯ ಜಿಲ್ಲೆಯು ಕಬ್ಬುಬೆಳೆ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಸಮಾನವಾಗಿದೆ. ಮೈಶುಗರ್ ಕಾರ್ಖಾನೆಯ ಪರಂಪರೆಯ ದೃಷ್ಟಿಯಿಂದ ಖಾಸಗೀಕರಣಕ್ಕೆ ನಿರಂತರ ಪ್ರತಿರೋಧ ವ್ಯಕ್ತವಾಗುತ್ತಿರುವುದು ಅರ್ಥವಾಗುವಂತಹದ್ದಾಗಿದೆ. ಆದರೆ ಪ್ರತಿರೋಧವು ಕಳವಳಕ್ಕೆ ಕಾರಣವಾಗಿದೆ. ಏಕೆಂದರೆ ಮಂಡ್ಯ ಜಿಲ್ಲೆಯ ರೈತರು ಬೆಳೆದಿರುವ ಕಬ್ಬನ್ನು ಮಾರಾಟಮಾಡಲು ಕಾರ್ಖಾನೆಯ ಸಮಯೋಚಿತ ಆರಂಭದ ಅಗತ್ಯವಿದೆ. ಇದನ್ನೂ ಓದಿ: ಚಿರು ಸಾವಿಗೆ ಸಾಂತ್ವಾನ ಹೇಳಿದ ರಾಘವೇಂದ್ರ ರಾಜ್​ಕುಮಾರ್​ ಕುಟುಂಬಕ್ಕೆ ಕಾನೂನು ಸಂಕಷ್ಟ

ಕಾರ್ಖಾನೆಯನ್ನು ನಡೆಸುವಲ್ಲಿ ಸರ್ಕಾರದ ವೈಫಲ್ಯ ಮತ್ತು ಸಂಪೂರ್ಣ ಖಾಸಗೀಕರಣದ ವಿರುದ್ಧ ಸಾರ್ವಜನಿಕರ ಭಾವನೆಯ ನಡುವೆ ನಮಗೆ ಇರುವ ಒಂದು ಆಯ್ಕೆಯೆಂದರೆ, ಕಾರ್ಯಾಚರಣೆ ಮತ್ತು ನಿರ್ವಹಣೆ (operations and maintenance) ವ್ಯವಸ್ಥೆಯಡಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ನಡೆಸುವುದು. ಈ ಮಧ್ಯಮ ವ್ಯವಸ್ಥೆಯು ಖಾಸಗೀಕರಣದ ವಿರುದ್ಧ ಸಾರ್ವಜನಿಕರಿಗಿರುವ ಭಾವನೆಯನ್ನು ತೃಪ್ತಿಪಡಿಸುವುದಲ್ಲದೆ ಕಾರ್ಖಾನೆಯು ಮತ್ತೊಮ್ಮೆ ಸಮೃದ್ಧಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ. ಇದರಿಂದ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ಯಾವುದೇ ಸಂಕಷ್ಟಗಳನ್ನು ಎದುರಿಸಬೇಕಾಗಿರುವುದಿಲ್ಲ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net