ಬೀದರ್​​ನಲ್ಲಿ ಆಕಾಶದಿಂದ ಇದ್ದಕ್ಕಿದ್ದಂತೆ ಮನೆಯ ಮೇಲ್ಛಾವಣಿಯ ಮೇಲೆ ಬಿತ್ತು ಸ್ಯಾಟಲೈಟ್ ಪೇಲೋಡ್ ಬಲೂನ್.. satellite payload balloon

satellite payload balloon
Published on

ಮನೆಯ ಮೇಲ್ಛಾವಣಿಯ ಮೇಲೆ  ಬಿತ್ತು ಸ್ಯಾಟಲೈಟ್ ಪೇಲೋಡ್ ಬಲೂನ್

ಬೀದರ್​: (satellite payload balloon ) ಜಿಲ್ಲೆಯ  ಜಲಸಂಗಿ ಗ್ರಾಮದ ಮನೆಯೊಂದರ ಮೇಲೆ ಬೆಳಗಿನ ಜಾವ ನಿಂಗಿಲೋ ಬಂದ ಸ್ಯಾಟಲೈಟ್ ಪೇಲೋಡ್ ಬಲೂನ್ ಬಿದ್ದಿದೆ.ಇದನ್ನು ನೋಡಿ ಗ್ರಾಮಸ್ಥರು ಆತಂಕಗೊಂಡಿರುವ ಘಟನೆ ನಡೆದಿದೆ.

ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ನಿಗೂಢ ಬಲೂನ್ ಒಂದು ಆಕಾಶದಿಂದ ಬಿದ್ದಿದೆ. ಬೃಹತ್ ಗಾತ್ರದ ಬಲೂನ್ ಜೊತೆಗೆ ಮಷಿನ್ ಕೂಡ ಇದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಸ್ಯಾಟಲೈಟ್ ಪೇಲೋಡ್ ಬಲೂನ್  ಭಾರೀ ಗಾತ್ರದ ಯಂತ್ರವಿದ್ದು, ಕೆಂಪು ದೀಪ ಬೆಳಗುತ್ತಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು. ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್‌ಆರ್)-ಹೈದರಾಬಾದ್‌ನಲ್ಲಿ ಬಲೂನ್ ಬಿಡಲಾಗಿದೆ ಎಂದು ತಿಳಿದುಬಂದಿದೆ.

ಮನೆ ಮೇಲೆ ಬಿದ್ದಿರುವ ಬಲೂನ್ ಕಂಡು ನಿವಾಸಿಗಳು ಹಾಗೂ ಗ್ರಾಮಸ್ಥರು ಶಾಕ್ ಆಗಿದ್ದಾರೆ. ಮಷೀನ್‌ನಿಂದ ರೆಡ್ ಲೈಟ್ ಬರುತ್ತಿರೋದ್ರಿಂದ ಗಾಬರಿಗೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸ್ತಿದ್ದಾರೆ.

ಬಲೂನ್​​​ನಲ್ಲಿ ಕನ್ನಡದಲ್ಲಿ ಬರೆದಿರುವ ಪತ್ರವೊಂದು ಪತ್ತೆಯಾಗಿದೆ. ಅದರಲ್ಲಿ ‘ಇದರಲ್ಲಿ ವೈಜ್ಞಾನಿಕ ಉಪಕರಣಗಳಿವೆ. ಟಿಐಎಫ್‌ಆರ್ ಬಲೂನ್ ಸೌಲಭ್ಯ ಇದಾಗಿದೆ. ದಯವಿಟ್ಟು ಗಮನಿಸಿ ಕೆಳಗಿನ ಸೂಚನೆ ಪಾಲಿಸಿದವರಿಗೆ ಬಹುಮಾನ ನೀಡಲಾಗುವುದು ಎಂದು ಹೇಳಿದೆ.

  • ಮಷಿನ್​ನಲ್ಲಿ ಏನಿದೆ ಎಂದು ತೆರೆದು ನೋಡಬಾರದು
  •  ಇದರಲ್ಲಿರುವ ಎಲ್ಲಾ ವಸ್ತುಗಳನ್ನು ಕಾಪಾಡಬೇಕು
  •  ಈ ಉಪಕರಣಗಳ ಬಿದ್ದ ಸ್ಥಾನದಿಂದ ಕದಿಲಿಸಬಾರದು
  •  ಸಮೀಪದ ಪೊಲೀಸ್ ಠಾಣೆಗೆ ತಿಳಿಸಬೇಕು
  •  ಕೆಳಗೆ ಕೊಟ್ಟ ದೂರವಾಣಿ ಸಂಖ್ಯೆಗೆ ಕರೆ ಮಾಡಿ
  •  ಈ ಉಪಕರಣ ಕೆಡಿಸಿದವರ ಮೇಲೆ ಕ್ರಮ ತೆಗೆದುಕೊಂಡು, ಪೊಲೀಸ್ ಕೇಸ್ ಮಾಡಲಾಗುತ್ತದೆ ಎಂದು ಒಂದಷ್ಟು ವಿವರಗಳನ್ನು ಬರೆಯಲಾಗಿದೆ. ಬಲೂನ್ ನೋಡಿದ ಜನರು ಆಘಾತಕ್ಕೆ ಒಳಗಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net