ಮೈಸೂರು ಮೃಗಾಲಯದಲ್ಲಿ ಹುಲಿ ಮರಿಗಳನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿದ ಸಚಿವ ಸೋಮಶೇಖರ್

'
Published on

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಜನಿಸಿದ ಮೂರು ಹುಲಿ ಮರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಶನಿವಾರ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿದರು.

ಹುಣಸೂರಿನ ಶೆಟ್ಟಿಹಳ್ಳಿಯಲ್ಲಿ ೨೦೧೮ರಲ್ಲಿ ಸಂರಕ್ಷಿಸಲ್ಪಟ್ಟ ಗಂಡು ಹುಲಿ ರಾಖಿ ಹಾಗೂ ೨೦೧೮ರಲ್ಲಿ ಚೆನ್ನೈ ಮೃಗಾಲಯದಿಂದ ಪ್ರಾಣಿ ವಿನಿಮ ಯೋಜನೆಯಡಿ ಆಗಮಿಸಿದ ತಾರಾ ಹೆಣ್ಣು ಹುಲಿಗೆ ೧ ಗಂಡು ಹಾಗೂ ಎರಡು ಹೆಣ್ಣು ಮರಿ ಜನಿಸಿತ್ತು. ಹೆಣ್ಣು ಹುಲಿ ತಾರಾ ಶ್ವೇತ ವರ್ಣದಿಂದ ಕೂಡಿದ್ದು, ಮೂರು ಮರಿಗಳು ಸಾಮಾನ್ಯ ವರ್ಣದಿಂದ ಕೂಡಿದೆ. ಮೃಗಾಲಯದಲ್ಲಿ ಪ್ರಸ್ತುತ ೩ ಗಂಡು, ೫ ಹೆಣ್ಣು ಹಾಗೂ ೩ ಮರಿಗಳು ಸೇರಿದಂತೆ ಒಟ್ಟು ೧೧ ಹುಲಿಗಳು ಇವೆ. ಕೂರ್ಗಳ್ಳಿಯ ಚಾಮುಂಡಿ ವನ್ಯಜೀವಿ ಸಂರಕ್ಷಣಾ ಕೇಂದ್ರದಲ್ಲಿ ೬ ಗಂಡು ಹುಲಿಗಳು ಇವೆ.

ಈ ಸಂದರ್ಭ ಶಾಸಕ ಎಸ್.ಎ. ರಾಮದಾಸ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪಾ, ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ್, ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net