

ಮೈಸೂರು: ಶಾಂತಿನಗರದ ಯುವಕ ಅರ್ಬಾಜ್ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಉದಯಗಿರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಉದಯಗಿರಿ ಬಡಾವಣೆಯ ನಿವಾಸಿಗಳಾದ ಶಾದಿಲ್, ಶಹಬಾಜ್, ಶೋಯಬ್ ಮತ್ತು ಸಾಹಿಲ್ ಬಂಧಿತರು. ಗುರಾಯಿಸಿ ನೋಡಿದ ಎಂಬ ಕಾರಣಕ್ಕೆ ಅರ್ಬಾಜ್ ಖಾನ್‌ನನ್ನು ಈ ನಾಲ್ವರು ಗುರುವಾರ ಹತ್ಯೆ ಮಾಡಿದ್ದರು. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.