ಮೈಸೂರು ಯೋಗ ಉತ್ಸವ 15ರಿಂದ

yoga
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗ ಪರಂಪರೆಯನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಡಿ.15 ರಿಂದ 17 ರವರೆಗೆ ನಗರದ ನಜರ್‌ಬಾದ್ ಪೊಲೀಸ್ ಠಾಣೆ ಬಳಿಯ ವಿಂಡ್ ಚೈಮ್ಸ್ ಸಭಾಂಗಣದಲ್ಲಿ ‘ಮೈಸೂರು ಯೋಗ ಉತ್ಸವ-2023’ ಆಯೋಜಿಸಲಾಗಿದೆ ಎಂದು ಉತ್ಸವ ಸಮಿತಿ ಸಂಚಾಲಕ ಡಾ.ವಿನಯಚಂದ್ರ ತಿಳಿಸಿದರು.

ಡಿ.15ರ ಬೆಳಗ್ಗೆ 11ಕ್ಕೆ ಉದ್ಘಾಟನೆಗೊಳ್ಳುವ ಈ ಯೋಗ ಉತ್ಸವದಲ್ಲಿ ಸುಮಾರು 300 ಜನ ಯೋಗಪಟುಗಳು, ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಯೋಗ, ಅಧ್ಯಾತ್ಮ, ಸ್ವಾಸ್ಥೃಕ್ಕೆ ಸಂಬಂಧಿಸಿದ ಪ್ರದರ್ಶನವಿರಲಿದೆ. ಆಸಕ್ತರಿಗೆ ಉಚಿತ ಯೋಗ ತರಗತಿ ಇರಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಯೋಗ ಬೋಧನೆ ಮತ್ತು ಕಲಿಕೆಯ ಸಂಪ್ರದಾಯವನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ಯೋಗಗುರುಗಳನ್ನು ಸನ್ಮಾನಿಸಲಾಗುತ್ತದೆ ಎಂದರು. ಯೋಗಗುರು, ಉದ್ಯಮಿ ಶ್ರೀ ಹರಿ ದ್ವಾರಕಾನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net