ಚಾಮುಂಡಿಬೆಟ್ಟಕ್ಕೆ ಮೈಸೂರು ವಾರಿಯರ್ಸ್ ಭೇಟಿ

4
Published on

ಮೈಸೂರು: ದೇಶದ ಪ್ರಮುಖ ಅಗರಬತ್ತಿ ತಯಾರಕರಾದ ಎನ್.ಆರ್.ಗ್ರೂಪ್ ಮಾಲೀಕತ್ವದ ಹಾಲಿ ಕೆಪಿಎಲ್ ಚಾಂಪಿಯನ್ ಮೈಸೂರು ವಾರಿಯರ್ಸ್‌ನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಾಂಪ್ರದಾಯಿಕ ಭೇಟಿ ನೀಡಿ ಪೂಜೆ ಸಲ್ಲಿಸುವುದರೊಂದಿಗೆ ಮಹಾರಾಜ ಟ್ರೋಫಿ-2025 ಅಭಿಯಾನ ಆರಂಭಿಸಿತು.

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಮೂಲಕ ಮುಂಬರುವ ಪಂದ್ಯಾವಳಿಯಲ್ಲಿ ಶಕ್ತಿ, ಏಕತೆ ಮತ್ತು ಯಶಸ್ಸಿಗೆ ದೈವಿಕ ಆಶೀರ್ವಾದ ಕೋರಲಾಯಿತು. ಮೈಸೂರು ವಾರಿಯರ್ಸ್‌ನ ಮಾಲೀಕರಾದ ಸೈಕಲ್ ಪ್ಯೂರ್ ಅಗರಬತ್ತಿ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್‌ರಂಗ, ತಂಡದ ಮುಖ್ಯ ತರಬೇತುದಾರ ಮತ್ತು ಸಹಾಯಕ ತರಬೇತುದಾರರು ಭಾಗವಹಿಸಿದ್ದರು.

ಪೂರ್ಣ ತಂಡವು ದೇವಾಲಯ ಭೇಟಿಯಲ್ಲಿ ಭಾಗವಹಿಸಿ, ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ತಯಾರಿ ನಡೆಸುತ್ತಿರುವಾಗ ಸಂಪ್ರದಾಯ ಮತ್ತು ಆಧ್ಯಾತ್ಮಿಕ ನೆಲೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿತು.

ಆಟಗಾರರಾದ ಮನೀಷ್ ಪಾಂಡೆ, ಎಸ್.ಯು. ಕಾರ್ತಿಕ್, ಕಾರ್ತಿಕ್ ಸಿ. ಅಜಿತ್, ಯಶೋವರ್ಧನ್ ಪರಂತಪ್, ಎಂ. ವೆಂಕಟೇಶ್, ಎಲ್.ಆರ್. ಕುಮಾರ್, ಹರ್ಷಿಲ್ ಧರ್ಮಾನಿ, ಗೌತಮ್ ಮಿಶ್ರಾ, ಶಿಖರ್‌ಶೆಟ್ಟಿ, ಕೆ.ಎಸ್.ಲಂಕೇಶ್, ಸುಮಿತ್‌ಕುಮಾರ್, ಧನುಷ್‌ಗೌಡ, ಎಸ್.ಎಂ.ಶಮಂತ್, ಕುಶಾಲ್ ಎಂ ವಾಧ್ವಾನಿ ಮತ್ತು ಶರತ್ ಶ್ರೀನಿವಾಸ್ ಇತರರು ಇದ್ದರು.

ಮಹಾರಾಜ ಟ್ರೋಫಿ ಟಿ-20 ಆಗಸ್ಟ್ 11 ರಿಂದ 27 ರವರೆಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಶ್ರೇಷ್ಠತೆ ಮತ್ತು ಕ್ರೀಡಾ ಮನೋಭಾವದ ಪರಂಪರೆಯನ್ನು ಹೊಂದಿರುವ ಮೈಸೂರು ವಾರಿಯರ್ಸ್, ರೋಮಾಂಚಕ ಪ್ರದರ್ಶನ ಮತ್ತು ನವೀಕೃತ ಉತ್ಸಾಹದೊಂದಿಗೆ ಈ ಅವಧಿಯಲ್ಲಿಯೂ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net