

ಮೈಸೂರು: ತಮಿಳುನಾಡಿನ ವೆಲ್ಲೂರು ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(ವಿಐಟಿ) ಆಯೋಜಿಸಿರುವ 2022-23ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ಟೆನಿಸ್ ಪಂದ್ಯಾವಳಿಗೆ ಮೈಸೂರು ವಿವಿ ತಂಡವನ್ನು ಆಯ್ಕೆ ಮಾಡಲಾಗಿದೆ.
ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಧನುಷ್, ಅರುಣ್ ಸುಹಾಸ್ ತಂಡಕ್ಕೆ ಆಯ್ಕಗಿದ್ದು, ತರಬೇತುದಾರ ಹಾಗೂ ವ್ಯವಸ್ಥಾಪಕ ಭಾಸ್ಕರ್ ಜತೆ ವೆಲ್ಲೂರು ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ತಿಳಿಸಿದ್ದಾರೆ.