

ಮೈಸೂರು: ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ 2023-24ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ನೆಟ್‌ಬಾಲ್ ಪಂದ್ಯಾವಳಿಯಲ್ಲಿ ಮೈಸೂರು ವಿವಿ ತಂಡ ಭಾಗಿಯಾಗಿದೆ.
ಈ ಸಂಬಂಧ ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಮೇ 4 ರಿಂದ 7ರವರೆಗೆ ಪಂದ್ಯಾವಳಿ ನಡೆಯಲಿದೆ.
ಜಿ.ಸ್ವಾತಿ(ನಾಯಕಿ) ಎಲ್.ಸುಚಿತ್ರಾ, ಎಂ.ಮೇಘಾ, ಹರ್ಷಿತಾ, ಬಿ.ರಂಜಿತಾ, ಎಸ್.ಶಿವಲೀಲಾ, ಎಸ್.ಎಂ.ಐಶ್ವರ್ಯಾ, ಕೆ.ಪವಿತ್ರಾ, ಎಂ.ಯಶಸ್ವಿನಿ, ಆರ್. ಪ್ರಿಯಾ, ಪ್ರಲೀ ಬೋಜಮ್ಮ , ಎಂ.ಮಾನ್ಯ ಆಯ್ಕೆಯಾಗಿದ್ದು, ತರಬೇತುದಾರರಾದ ಇ.ಕೆ.ಶಿವಮೂರ್ತಿ, ಲೋಕೇಶ್, ವ್ಯವಸ್ಥಾಪಕಿ ಪ್ರತಿಮಾ ಜತೆ ತಮ್ಮ ತಂಡ ಪಂದ್ಯಾವಳಿಯಲ್ಲಿ ಭಾಗಿಯಾಗಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.