

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ 2024-25ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಮೈಸೂರು ವಿವಿ ತಂಡ ಭಾಗಿಯಾಗಿದೆ.
ಈ ಸಂಬಂಧ ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಮಾ.14 ರಿಂದ 17ರವರೆಗೆ ಪಂದ್ಯ ನಡೆಯಲಿದೆ.
ಎಚ್.ಸಿ.ಸಚಿನ್(ನಾಯಕ), ಮದನ್‌ಕುಮಾರ್, ಸೂರ್ಯ, ರಾಜೇಶ್, ಕಿರಣ್, ಚಂದನ್, ಮಂಜು, ಕೀರ್ತಿಕುಮಾರ್, ವಿಕಾಸ್, ಸುಹಾಸ್ ಆಯ್ಕೆಯಾಗಿದ್ದು, ತರಬೇತುದಾರ ಸಿ.ಮಹೇಂದ್ರ, ವ್ಯವಸ್ಥಾಪಕ ಡಾ.ಪಶುಪತಿ ನೇತೃತ್ವದಲ್ಲಿ ನಮ್ಮ ತಂಡ ಪಂದ್ಯದಲ್ಲಿ ಭಾಗಿಯಾಗಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.