ಕಬಡ್ಡಿ, ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೈಸೂರು ವಿವಿ ತಂಡ ಭಾಗಿ

kabaddi
2021-22ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಮೈಸೂರು ವಿವಿಯ ತಂಡದ ಜತೆ ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ. ಕೃಷ್ಣಯ್ಯ, ತರಬೇತುದಾರ ಆರ್.ರಮೇಶ್, ವ್ಯವಸ್ಥಾಪಕ ಸುಭಾಷ್ ಇದ್ದಾರೆ.
Published on


ಮೈಸೂರು: ಕರೈಕುಡಿಯ ಅಲಗಪ್ಪನ್ ವಿಶ್ವವಿದ್ಯಾಲಯದಲ್ಲಿ ಫೆ.22 ರಿಂದ 26 ರವರೆಗೆ ನಡೆಯಲಿರುವ 2021-22ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಪಂದ್ಯಾವಳಿಗೆ ಮೈಸೂರು ವಿವಿ ತಂಡವನ್ನು ಆಯ್ಕೆ ಮಾಡಲಾಗಿದೆ.


ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದಿದೆ.


ಶಾರದಾ ವಿಲಾಸ ಕಾಲೇಜಿನ ನೀಲಾ(ನಾಯಕಿ), ಮೋನಿಕಾ, ಸುಮಾ, ಲಕ್ಷ್ಮೀ, ವಿದ್ಯಾವಿಕಾಸ ಕಾಲೇಜಿನ ಶ್ವೇತಾ, ಐಶ್ವರ್ಯ, ಅಶ್ವಿನಿ, ದೀಕ್ಷಾ , ಕಾವ್ಯ, ಮಾನಸಗಂಗೋತ್ರಿ ಪಿಜಿಎಸ್‌ಇಯ ನಿಸರ್ಗ, ಕುವೆಂಪು ಕಾಲೇಜಿನ ಯಮುನಾ, ಕ್ರೆಸ್ಟಾ ಕಾಲೇಜಿನ ಶಾಲಿನಿ ಆಯ್ಕೆಯಾಗಿದ್ದಾರೆ. ತರಬೇತುದಾರ ಆರ್.ರಮೇಶ್, ವ್ಯವಸ್ಥಾಪಕ ಸುಭಾಷ್ ಜತೆ ತಮ್ಮ ತಂಡ ಅಲಗಪ್ಪನ್ ವಿವಿಗೆ ಪ್ರಯಾಣ ಬೆಳೆಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಹಿಳೆಯರ ಅಥ್ಲೆಟಿಕ್ಸ್:
ಫೆ. 21 ರಿಂದ 24 ರವರೆಗೆ ಭುವನೇಶ್ವರದ ಕೈಐಐಟಿ ವಿವಿಯಲ್ಲಿ ನಡೆಯುತ್ತಿರುವ 2021-22ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿದ್ಯಾಶ್ರಮ ಪ್ರಥಮ ದರ್ಜೆ ಕಾಲೇಜಿನ ಹರ್ಷಿಣಿ, ಮಾನಸಗಂಗೋತ್ರಿ ಪಿಜಿಎಸ್‌ಇಯ ವಿ.ಅಂಬಿಕಾ, ತರಬೇತುದಾರ ಎಂ.ಪುನೀತ್, ವ್ಯವಸ್ಥಾಪಕ ಎಚ್.ಎನ್.ಭಾಸ್ಕರ್ ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net