ಮೈಸೂರು ವಿವಿ ಪದವಿ ಪರೀಕ್ಷೆ ಮುಂದೂಡುವಂತೆ ಒತ್ತಾಯ

1
Published on

ಮೈಸೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ ಎಐಡಿಎಸ್‌ಒ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಸೋಮವಾರ ಕ್ರಾಫರ್ಡ್ ಹಾಲ್ ಎದುರು ಪ್ರತಿಭಟನೆ ನಡೆಸಿದರು.

ಮೈಸೂರು ವಿವಿ ಪದವಿ ತರಗತಿಗಳು ಆರಂಭವಾಗಿ ಕೇವಲ 2 ತಿಂಗಳಾಗಿವೆ. ಯಾವುದೇ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಪಾಠಗಳು ನಡೆದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತರಾತುರಿಯಲ್ಲಿ ಪರೀಕ್ಷೆ ನಡೆಸುವ ಮೈಸೂರು ವಿವಿಯ ನಿರ್ಧಾರದಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಪರೀಕ್ಷೆಗೆ ಕಾಲಾವಕಾಶ ನೀಡದೆ ತರಾತುರಿಯಲ್ಲಿ ಮಾಡಲು ಮುಂದಾಗಿದ್ದಾರೆ. ಇದು ವಿದ್ಯಾರ್ಥಿ ವಿರೋಧಿ ಧೋರಣೆ. ಅಲ್ಲದೇ 4 ತಿಂಗಳು ಸಂಪೂರ್ಣವಾಗಿ ಸೆಮಿಸ್ಟರ್ ತರಗತಿಗಳು ನಡೆಯಬೇಕಾಗಿತ್ತು.

ಈ ರೀತಿಯಾಗದೇ ಕೇವಲ 2 ತಿಂಗಳು ಪಾಠ ನಡೆಸಿ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳಿಗೆ ಅನನುಕೂಲವಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 15 ದಿನಗಳಾದರೂ ಪರೀಕ್ಷೆಗಳನ್ನು ಮುಂದೂಡಬೇಕು. ಪರೀಕ್ಷೆಗಳ ನಡುವೆ ಅಂತರ ಕೊಡಬೇಕು ಎಂದು ಒತ್ತಾಯಿಸಿದರು.

ಎಐಡಿಎಸ್ ಜಿಲ್ಲಾಧ್ಯಕ್ಷ ಸುಭಾಷ್, ಪದಾಧಿಕಾರಿಗಳಾದ ನಿತಿನ್, ಚಂದ್ರಿಕಾ, ಚಂದನಾ, ಹೇಮಾ, ರಕ್ಷಿತಾ, ವಿದ್ಯಾರ್ಥಿಗಳಾದ ಚೇತನ್, ನಾಗರಾಜ್, ವಿಜಯ್, ರಾಜು, ಸುಹೇಲ್, ಸಂತೋಷ್, ಶಿವು, ರತನ್, ಸುನಿಲ್, ಚೈತ್ರಾ, ಸುಮಂತ್, ಶ್ರೇಯಸ್, ಮಹಾರಾಜ, ಮಹಾರಾಣಿ, ವಿದ್ಯಾವರ್ಧಕ, ಶಾರದಾ ವಿಲಾಸ ಹಾಗೂ ವಿವಿಧ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net