

ಕಾರೈಕುಡಿ ಅಲಗಪ್ಪ ವಿಶ್ವವಿದ್ಯಾಲಯಲ್ಲಿ ಆಯೋಜಿಸಿರುವ 2024-25ನೇ ಸಾಲಿನ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮೈಸೂರು ವಿವಿ ತಂಡ ಭಾಗಿಯಾಗಿದೆ.
ಈ ಸಂಬಂಧ ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಮಾರ್ಚ್ 29ರಿಂದ ಏಪ್ರಿಲ್ 1ರವರೆಗೆ ಪಂದ್ಯಾವಳಿ ನಡೆಯಲಿದೆ.
ಪೂರ್ಣಿಮ(ನಾಯಕಿ), ಕೆ.ಟಿ.ಶಶಿಕಲಾ, ಜೆ.ಯಶಸ್ವಿನಿ, ವಿ.ಎಂ.ಸಿಂಚನಾ, ಡಿ.ಕೆ.ಪ್ರಕೃತಿ, ಎಚ್.ಎಂ.ಯಮುನಾ, ಎಂ.ಅನ್ನಪೂರ್ಣ, ಜೆ.ಟಿ.ಪುಪ್ಪ, ಕಿರಣ, ಎನ್.ನಿಸರ್ಗ ಆಯ್ಕೆಯಾಗಿದ್ದು, ತರಬೇತುದಾರರಾದ ವಿ.ರಂಜಿತಾ, ವ್ಯವಸ್ಥಾಪಕಿ ಕೆ.ಜಯಶ್ರೀ ನೇತೃತ್ವದಲ್ಲಿ ನಮ್ಮ ತಂಡ ಪಂದ್ಯಾವಳಿಯಲ್ಲಿ ಭಾಗಿಯಾಗಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.