ವಿವಿ ವಿಲೀನಗೊಳಿಸುವ ನಿರ್ಣಯ ಕೈಬಿಡಲಿ: ಮೈಸೂರು ವಿವಿ ಶಿಕ್ಷಣ ಮಂಡಳಿ ಮಾಜಿ ಸದಸ್ಯ ಸಿದ್ದರಾಜು ಒತ್ತಾಯ

Mysore University Board of Education ex-member press conference Mandya
Published on

ಮಂಡ್ಯ: ಐದು ವರ್ಷದ ಹಿಂದೆ ಪ್ರಾರಂಭಗೊಂಡ ಮಂಡ್ಯ ವಿಶ್ವವಿದ್ಯಾಲಯವನ್ನು ಮೈಸೂರು ವಿವಿಗೆ ವಿಲೀನಗೊಳಿಸುವ ನಿರ್ಣಯವನ್ನು ಕೈಬಿಡಬೇಕು ಎಂದು ಮೈಸೂರು ವಿವಿಯ ಶಿಕ್ಷಣ ಮಂಡಳಿ ಮಾಜಿ ಸದಸ್ಯ ಡಾ.ವೈ.ಎಸ್.ಸಿದ್ದರಾಜು ಆಗ್ರಹಿಸಿದರು.

ಮಂಡ್ಯ ಜಿಲ್ಲೆಗೆ ವಿಶ್ವವಿದ್ಯಾಲಯ ಲಭಿಸಿರುವುದು ಹೆಮ್ಮೆಯ ವಿಷಯ. ಅದನ್ನು ಉಳಿಸಿಕೊಂಡು ಕೊಂಡೊಯ್ಯವಲ್ಲಿ ಜಿಲ್ಲಾ ಮಂತ್ರಿಗಳು ಹಾಗೂ ಶಾಸಕರು ವಿಫಲರಾಗಿದ್ದಾರೆ. ಮಂಡ್ಯ ವಿವಿಯನ್ನು ಮೈಸೂರು ವಿವಿಯೊಂದಿಗೆ ವಿಲೀನ ಮಾಡಿದರೆ ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ವ್ಯಾಸಂಗ ಮಾಡುತ್ತಿರುವ ಹಾಲಿ ವಿದ್ಯಾರ್ಥಿಗಳಿಗೆ ಘೋರ ಅನ್ಯಾಯ ಮಾಡಿದಂತಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆಗೆ 53 ಸಾವಿರ ಕೋಟಿ ರೂ ವ್ಯಯಿಸುತ್ತಿದೆ. ಅದರಂತೆಯೇ ಪದವಿ ಹಾಗೂ ಸ್ನಾತಕೋತ್ತರ ಪದವಿಗೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳನ್ನು ಅವಲಂಭಿಸಿರುವ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಎಲ್ಲ ವಿವಿಗೆ ತಲಾ 20 ಕೋಟಿ ರೂನಂತೆ ಅನುದಾನ ನೀಡಿ ಉಳಿಸಿಕೊಳ್ಳಬೇಕು. ಇದರಿಂದ ಸರ್ಕಾರಕ್ಕೆ 180 ಕೋಟಿ ರೂ ನಷ್ಟು ಹೊರೆಯಾಗಬಹುದಷ್ಟೇ ಎಂದು ಸಲಹೆ ನೀಡಿದರು.

ಮಂಡ್ಯ ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿ ಸದಸ್ಯ ಕೆ.ಶಿವಶಂಕರ್, ಸಮಗ್ರ ಸಾವಯವ ಸುಸ್ತಿರ ಕೃಷಿ ಟ್ರಸ್ಟ್‌ನ ಅಧ್ಯಕ್ಷ ಜೋಗಿಗೌಡ, ಸುಂದ್ರಪ್ಪ, ರಂಜಿತ್, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net