ಇಂದಿನಿಂದ ಮೈಸೂರು ಸಾಂಪ್ರದಾಯಿಕ ಶೈಲಿ ತರಬೇತಿ ಕಾರ್ಯಾಗಾರ

Published on

ವಿಜಯಪುರ: ನಗರದ ಸಾಯಿಪಾರ್ಕ್​ ಬಳಿಯ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನ. 6 ರಿಂದ 9 ರವರೆಗೆ ಮೈಸೂರು ಸಾಂಪ್ರದಾಯಿಕ ಶೈಲಿ ತರಬೇತಿ ಕಾರ್ಯಾಗಾರ ನಡೆಯಲಿದೆ.

ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ನ. 6 ರಂದು ಬೆಳಗ್ಗೆ 11 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಹಿರಿಯ ಕಲಾವಿದ ಪಿ.ಎಸ್​. ಕಡೇಮನಿ ನೆರವೇರಿಸುವರು.

ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮತ್ತು ರಾಜ್ಯ ಮಹಿಳಾ ವಿವಿಯ ಪ್ರಾಧ್ಯಾಪಕ ಡಾ. ವಿಷ್ಣು ಶಿಂದೆ ಆಗಮಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರಿನ ಕಲಾವಿದ ಎಚ್​.ಎನ್​. ರವೀಶ್​ ಉಪಸ್ಥಿತಿ ವಹಿಸುವರು.

ತರಬೇತಿ ಕಾರ್ಯಾಗಾರದಲ್ಲಿ ರಾಜ್ಯದ ನಾನಾ ಭಾಗಗಳಿಂದ ಇಪ್ಪತ್ತು ಕಲಾವಿದರು ಭಾಗವಹಿಸಲಿದ್ದು, ಸಾಂಪ್ರದಾಯಿಕ ರೇಖಾ ವಿಧಾನ ಕುರಿತು ಶ್ರೀಶೈಲ ಹೂಗಾರ ಉಪನ್ಯಾಸ ನೀಡಲಿದ್ದಾರೆ.

ನ, 9 ರಂದು ಮಧ್ಯಾಹ್ನ 3 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪೊ. ಎಸ್​.ಟಿ. ಮೇರವಾಡೆ ಸಮಾರೋಪ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯೆ ವಿಠಲ ಹೊಸಪೇಟ, ಉದ್ಯಮಿ ನಾಗೇಶ ಶೆಟ್ಟಿ ಆಗಮಿಸುವವರು. ಚಾಣಕ್ಯ ಕರಿಯರ್​ ಅಕಾಡಮಿ ಮುಖ್ಯಸ್ಥ ಎನ್​.ಎಂ. ಬಿರಾದಾರ ಅಧ್ಯಕ್ಷತೆ ವಹಿಸುವರು. ನಾಲ್ಕು ದಿನಗಳ ಕಾರ್ಯಾಗಾರದಲ್ಲಿ ರಿಜಿಸ್ಟ್ರಾರ್​ ಕರ್ನಾಟಕ ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್​ ಬಿ. ನೀಲಮ್ಮ ಉಪಸ್ಥಿತಿ ವಹಿಸುವರು ಎಂದು ಅಕಾಡಮಿ ಸದಸ್ಯೆ ರಾಜೇಶ್ವರಿ ಮೋಪಗಾರ ಹಾಗೂ ಪ್ರಾಚಾರ್ಯ ಎಸ್​.ಟಿ. ಮೇರವಾಡೆ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net