

ಮೈಸೂರು: ಮೈಸೂರಿನಿಂದ ರಾಮೇಶ್ವರಂಗೆ ವಾರಕ್ಕೊಮ್ಮೆ ಮೈಸೂರು-ಮನಮದುರೈ ನಡುವೆ ವಿಶೇಷ ರೈಲು ಸಂಚಾರ ಆರಂಭವಾಗಲಿದೆ.
ಮೈಸೂರಿನಿಂದ ಮೊದಲ ರೈಲು ಏ.1ರಂದು ಹೊರಡಲಿದೆ. ಮನಮದುರೈನಿಂದ ಏ.2ರಂದು ರೈಲು ಮೈಸೂರಿನತ್ತ ಪಯಣ ಪಯಣಿಸಲಿದೆ.
ಸೋಮವಾರ ಸಂಜೆ 6.35ಕ್ಕೆ ಮೈಸೂರಿಂದ ಹೊರಡಲಿರುವ ರೈಲು ಗಾಡಿ ಮಂಗಳವಾರ ಬೆಳಗ್ಗೆ 9.10ಕ್ಕೆ ರಾಮೇಶ್ವರಂ ತಲುಪಲಿದೆ. ಅದೇ ದಿನ ಮಧ್ಯಾಹ್ನ 12 ಗಂಟೆಗೆ ಮೈಸೂರಿನತ್ತ ಹೊರಡುವ ರೈಲು ಗಾಡಿ ರಾತ್ರಿ 8.50ಕ್ಕೆ ನಿಲ್ದಾಣ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.