‘ಫ್ಲೆಕ್ಸ್‌ಗಳ ನಗರಿ’ಯಾದ ಮೈಸೂರು

7
Published on

ಮೈಸೂರು: ‘ಮೈಸೂರು ಚಲೋ’ ಪಾದಯಾತ್ರೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಶನಿವಾರ ‘ಫ್ಲೆಕ್ಸ್‌ಗಳ ನಗರಿ’ ರೀತಿ ಭಾಸವಾಗುತ್ತಿತ್ತು.
ಕಾರ್ಯಕ್ರಮ ಆಯೋಜಿಸಿದ್ದ ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತ, ಪಾದಯಾತ್ರೆ ಸಾಗಿದ ರಸ್ತೆಗಳ ಉದ್ದಕ್ಕೂ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಾಯಕರ ಮತ್ತು ಕಾರ್ಯಕರ್ತರ ಫ್ಲೆಕ್ಸ್‌ಗಳು, ಪಕ್ಷಗಳ ಬಾವುಟ, ನಾಯಕರ ಕಟೌಟ್‌ಗಳು ತುಂಬಿದ್ದವು. ಎಲ್ಲಿ ನೋಡಿದರೂ ಅಲ್ಲಿ ಫ್ಲೆಕ್ಸ್ ಮತ್ತು ಕಟೌಟ್‌ಗಳು ರಾರಾಜಿಸುತ್ತಿದ್ದವು. ಜತೆಗೆ ಪಾದಯಾತ್ರೆಗೆ ಸ್ವಾಗತಿಸಿ, ಶುಭಕೋರಿದ ಫ್ಲೆಕ್ಸ್‌ಗಳನ್ನು ಎಲ್ಲೆಡೆ ಬೆಂಬಲಿಗರು ಹಾಕಿಸಿದ್ದರು.
ಎಲ್ಲ ಫ್ಲೆಕ್ಸ್‌ಗಳಲ್ಲಿ ಕೇಸರಿ, ಹಸಿರು ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗಿತ್ತು. ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ್, ಆರ್.ಅಶೋಕ್ ಸೇರಿದಂತೆ ಮುಖಂಡರ ಬೃಹತ್ ಕಟೌಟ್‌ಗಳನ್ನು ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆಯ ವಿದ್ಯುತ್ ಕಂಬಗಳಿಗೆ ಹಾಕಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net