

ಮೈಸೂರು: ಮೈಸೂರು ವಿಭಾಗಿಯ ಮಟ್ಟದ ಸಮಾಜ ಕಲ್ಯಾಣ ಇಲಾಖೆಯ ನೌಕರರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈಸೂರು ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ಅಭಿನಂದಿಸಿ, ರಾಜ್ಯ ಮಟ್ಟದಲ್ಲಿಯೂ ಮೈಸೂರು ತಂಡ ಗೆಲುವು ಸಾಧಿಸಲಿ ಎಂದು ಶುಭ ಹಾರೈಸಿದರು.
ಮಾನಸ ಗಂಗೋತ್ರಿಯ ವಿಲೇಜ್ ಹಾಸ್ಟೆಲ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಅಂತಿಮ ಪಂದ್ಯದಲ್ಲಿ 8 ಓವರ್‌ಗಳಲ್ಲಿ 102 ರನ್‌ಗಳ ಗುರಿಯನ್ನು ತಲುಪಿದ ಮೈಸೂರು ತಂಡ ಎದುರಾಳಿ ಚಿಕ್ಕಮಗಳೂರು ತಂಡವನ್ನು 50 ರನ್‌ಗಳಿಂದ ಸೋಲಿಸಿತು.
ಈ ಪಂದ್ಯದಲ್ಲಿ ಸರಣಿ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಹಾಸನ ತಂಡದ ದಿನೇಶ್ ಪಡೆದರೆ, ಸರಣಿಯ ಉತ್ತಮ ಬೌಲರ್ ಪ್ರಶಸ್ತಿಯನ್ನು ಮೈಸೂರು ತಂಡದ ಕೆ.ಎ.ಎಸ್.ಪ್ರದೀಪ್ ಗಳಿಸಿದರು. ಸರಣಿ ಸರ್ವೋತ್ತಮ ಪ್ರಶಸ್ತಿಯನ್ನು ಮೈಸೂರು ತಂಡದ ಮನು ತಮ್ಮದಾಗಿಸಿಕೊಂಡರು.
ಸಮಾಜ ಕಲ್ಯಾಣ ಇಲಾಖೆಯ ಕೊಡಗು ಜಿಲ್ಲೆಯ ಉಪ ನಿರ್ದೇಶಕ ಶೇಖರ್, ಮಂಡ್ಯ ಜಿಲ್ಲಾ ಉಪ ನಿರ್ದೇಶಕ ಸಿದ್ದಲಿಂಗೇಶ್, ತಾಲೂಕು ಕಲ್ಯಾಣಾಧಿಕಾರಿಗಳಾದ ಜನಾರ್ದನ್, ರಾಮಸ್ವಾಮಿ, ಅಶೋಕ್, ಸಿದ್ದೇಗೌಡ, ಶಂಕರಮೂರ್ತಿ, ಚಂದ್ರಶೇಖರ್, ಸುಲೋಚನಾ, ವೆಂಕಟರಾಜು, ಕಚೇರಿ ಸಿಬ್ಬಂದಿ, ನಿಲಯ ಪಾಲಕರು ಇದ್ದರು.