ಮೈಸೂರು: ಶ್ರೀರಾಮಂದಿರ ನಿರ್ಮಾಣಕ್ಕೆ ತಡೆ

WhatsApp Image 2025-05-23 at 12.55.20 PM
Published on

ಮೈಸೂರು: ಅಯೋಧ್ಯೆಯ ಶ್ರೀರಾಮಮಂದಿರದ ಬಾಲರಾಮ ಮೂರ್ತಿ ನಿರ್ಮಾಣಕ್ಕೆ ಶಿಲೆ ದೊರೆತ ಜಾಗದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆರಂಭಿಕ ವಿಘ್ನ ಎದುರಾಗಿದೆ.

ಬಾಲರಾಮ ಶಿಲೋದ್ಭವ ಕ್ಷೇತ್ರ ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ಹಾರೋಹಳ್ಳಿಯಲ್ಲಿ ಶುಕ್ರವಾರ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಧ್ವಜಾರೋಹಣ ಹಾಗೂ ಮೂರ್ತಿ ಕೆತ್ತನೆ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ದಲಿತ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದು ಪಡಿಸಲಾಯಿತು.

ಮಂದಿರ ನಿರ್ಮಾಣಕ್ಕೆ ಮುಂದಾದರೆ ಹೋರಾಟ ನಡೆಸಲಾಗುವುದು ಎಂದು ದಲಿತ ಮುಖಂಡ ಪುರುಷೋತ್ತಮ್ ಗುರುವಾರ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಕರು ಶುಕ್ರವಾರ ಸ್ಥಳಕ್ಕೆ ಆಗಮಿಸಲಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ದಲಿತ ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸಿ ರಾಮ ಮಂದಿರ ನಿರ್ಮಾಣಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀರಾಮಮಂದಿರ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗದಲ್ಲಿ ಹಾರೋಹಳ್ಳಿ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಂುುವಕರ ಸಂಘಟನೆಯಿಂದ ಬುದ್ಧ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಇರಿಸಿ ಪ್ರತಿಭಟನೆ ನಡೆಸಲಾಯಿತು. ಬೆಳಗ್ಗೆ 10ಕ್ಕೆ ಮೈಸೂರು-ಮಾನಂದವಾಡಿ ಹೆದ್ದಾರಿ, ಹಾರೋಹಳ್ಳಿ ರಸ್ತೆ ವಾರ್ಗವಾಗಿ ಬುದ್ಧ, ಅಂಬೇಡ್ಕರ್ ಪ್ರತಿಮೆ ಹೊತ್ತು ತಂದು ಶ್ರೀ ರಾಮಮಂದಿರ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗದಲ್ಲಿ ಇರಿಸಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ದಲಿತ ಮುಖಂಡ, ಮೈಸೂರು ಮಾಜಿ ಮೇಯರ್ ಪುರುಷೋತ್ತಮ್, ಹಾರೋಹಳ್ಳಿ ಗ್ರಾಮದ ಇತಿಹಾಸ ಬದಲಾವಣೆ ಮಾಡಲು ಮನುವಾದಿಗಳು ಯತ್ನಿಸುತ್ತಿದ್ದು, ಡಾ.ಬಿ.ಆರ್. ಅಂಬೇಡ್ಕರ್ ಅನುಂಾಯಿಗಳು ಅದನ್ನು ನಿಲ್ಲಿಸುವಲ್ಲಿ ಂುಶಸ್ವಿಂಾಗಿದ್ದೇವೆ. ಹಾರೋಹಳ್ಳಿ ಗ್ರಾಮವನ್ನು ಬ್ರಾಹ್ಮಣಶಾಹಿಗಳು ಕೇಸರಿಕರಣ ವಾಡಲು ಹೊರಟಿದ್ದಾರೆ, ಅದಕ್ಕೆ ನಮ್ಮ ವಿರೋಧವಿದೆ. ಅಂೋಧ್ಯೆಂುಲ್ಲಿ ರಾಮನ ಹೆಸರಲ್ಲಿ ದಲಿತ ಸಮುದಾಂುದವರನ್ನು ದಬ್ಬಾಳಿಕೆ ವಾಡುತ್ತ ಶಿಕ್ಷಣದಿಂದ ವಂಚಿತರನ್ನಾಗಿ ವಾಡುತ್ತಿದ್ದಾರೆ. ಇಲ್ಲಿ ದಲಿತ ಸಮುದಾಂುದ ಆಸ್ತಿ ಕಬಳಿಕೆ ವಾಡುವ ಹುನ್ನಾರ ನಡೆಯುತ್ತಿದೆ. ನಮಗೆ ಬೇಕಿರುವುದು ರಾಮಮಂದಿ ರವಲ್ಲ ಬುದ್ಧ ಮಂದಿರ ಎಂದು ಒತ್ತಾಯಿಸಿದರು.

ಜಾಗದ ಮಾಲೀಕರಾದ ರಾಮದಾಸ್ ಅವರಿಗೆ ಆಮಿಷೆ ತೋರಿಸಿ ಅವರನ್ನು ಪುಸಲಾಯಿಸಿ ಶ್ರೀರಾಮಂದಿರ ನಿರ್ಮಾಣಕ್ಕೆ ಯತ್ನ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ. ಈ ಜಾಗದಲ್ಲಿ ಮುಂದಿನ ದಿನಗಳಲ್ಲಿ ನಳಂದ ವಿಶ್ವವಿದ್ಯಾಲಯ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ವಿದ್ಯಾಸಂಸ್ಥೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಹಾರೋಹಳ್ಳಿ ಗ್ರಾಮದ ಮುಖಂಡ ಹಾರೋಹಳ್ಳಿ ಸುರೇಶ್ ಮಾತನಾಡಿ, ಹಾರೋಹಳ್ಳಿ ಗ್ರಾಮದ ಜನರು ಸೌಹರ್ದತೆಯಿಂದ ಬದುಕುತ್ತಿದ್ದೇವೆ. ರಾಜಕೀಂು ಕುತಂತ್ರಕ್ಕೆ ನಮ್ಮ ಸಮುದಾಂುವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಡಾ.ಬಿ.ಆರ್. ಅಂಬೇಡ್ಕರ್ ಆಶಂುದಂತೆ ನಾವೆಲ್ಲರು ಬದುಕುತ್ತಿದ್ದೇವೆ. ಶ್ರೀರಾಮಮಂದಿರ ನಿರ್ಮಾಣದಿಂದ ಸಮಾಜಕ್ಕೆ ಏನು ಲಾಭ? ನಮ್ಮ ಗ್ರಾಮವನ್ನು ಂಾವುದೇ ಕಾರಣಕ್ಕೂ ಕೇಸರಿಕರಣ ವಾಡಲು ಬಿಡುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಹಾರೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹಾರೋಹಳ್ಳಿ ಸುರೇಶ್ ಕುವಾರ್, ದಲಿತ ಸಂಘಟನೆ ಪ್ರಮುಖರಾದ ನಟರಾಜು, ಮಹದೇವ್, ದೀಪಕ್ ಕಿರಣ್, ತುಂಬಲ ರಾಮಣ್ಣ ,ವಿಷ್ಣು, ಗುರುರಾಜ್, ಅನಿಲ್ ಚಂದ್ರಣ್ಣ, ರಾಜೇಶ್, ಶಿವರಾಜ್, ರಾಜೇಶ್, ಸೋಮ, ದೇವ, ಕೇಬಲ್ ಸೂರಿ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net