

ಮೈಸೂರು: ಮೈಸೂರು ಫಿಲ್ಮ್ ಇನ್ಸ್‌ಟಿಟ್ಯೂಟ್ ಮತ್ತು ರೋಲಿಂಗ್ ಮೀಡಿಯಾ ಹೌಸ್ ಸಂಸ್ಥೆ ನಿರ್ಮಾಣ ಮಾಡಿರುವ ‘ನಮ್ಮೂರು ಮೈಸೂರು ನಾವೇನೆ ರಾಜರು’ ಲಿರಿಕಲ್ ಗೀತೆಯನ್ನು ಸಂಸ್ಥೆಯ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ನಮ್ಮ ಈ ಪ್ರಯತ್ನಕ್ಕೆ ಜನರು ಬೆಂಬಲ ನೀಡಬೇಕೆಂದು ನಿರ್ಮಾಪಕ ಸತೀಶ್ ಪೊನ್ನಾಚಿ ಮನವಿ ಮಾಡಿದರು.
ಮೈಸೂರಿನ ಹಿರಿಮೆಯನ್ನು ಗೀತೆಯ ಮೂಲಕ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದೇವೆ. ಯುವ ಸಮುದಾಯವನ್ನು ಹೆಚ್ಚಾಗಿ ಆಕರ್ಷಿಸಲು ರ‌್ಯಾಪ್ ಹಾಗೂ ಫೋಕ್ ವರ್ಷನ್‌ನಲ್ಲಿ ಗೀತೆ ರಚನೆಗೊಂಡಿದೆ. ಡಾ.ಆರ್. ಸತೀಶ್ ಸೋಲೂರು ಸಾಹಿತ್ಯ ರಚನೆ ಮಾಡಿದ್ದು, ಸಂಗೀತ ನಿರ್ದೇಶಕ ಹರಿಕಾವ್ ರಾಗ ಸಂಯೋಜನೆ ಮಾಡಿದ್ದಾರೆ. ಗಾಯಕರಾದ ವಿಜೇತ್ ಕೃಷ್ಣ, ಹರಿಕಾವ್ಯ, ಶಶಾಂಕ್ ಶೇಷಗಿರಿ ಅವರ ಸಿರಿಕಂಠದಲ್ಲಿ ಗೀತೆ ಮೂಡಿ ಬಂದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.