

ಮೈಸೂರು: ಕಡಿಮೆ ಪ್ರಯಾಣಿಕರ ದಟ್ಟಣೆಯ ಕಾರಣದಿಂದಾಗಿ ಈ ಹಿಂದೆ ರದ್ದುಗೊಳಿಸಲಾಗಿದ್ದ 2 ರೈಲುಗಳ ಸೇವೆಯನ್ನು ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಪುನಃ ಆರಂಭಿಸಲು ನಿರ್ಧರಿಸಲಾಗಿದೆ.
ರೈಲು ಸಂಖ್ಯೆ 06243 ಮೈಸೂರು-ಕರೈಕುಡಿ ವಿಶೇಷ ಎಕ್ಸಪ್ರೆಸ್ ರೈಲು ನ.8 ರಂದು ತನ್ನ ಸೇವೆಯನ್ನು ಪುನರಾರಂಭಿಸಲಿದೆ. ರೈಲು ಸಂಖ್ಯೆ 06244 ಕರೈಕುಡಿ-ಮೈಸೂರು ವಿಶೇಷ ಎಕ್ಸಪ್ರೆಸ್ ರೈಲು ನ. 9 ರಂದು ತನ್ನ ಸಂಚಾರವನ್ನು ಪುನಃ ಆರಂಭಿಸಲಿದೆ. ಈ ರೈಲುಗಳು ತಮ್ಮ ಮೂಲ ವೇಳಾಪಟ್ಟಿಯ ಪ್ರಕಾರವೇ ಸಂಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.