

ಮೈಸೂರು: ರಂಗಾಯಣ ಮೈಸೂರು ಮತ್ತು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಸಂಯುಕ್ತಾಶ್ರಯದಲ್ಲಿ ಜ.13ರಿಂದ 17ರವರೆಗೆ ರಂಗಾಯಣದ ಭೂಮಿಗೀತದಲ್ಲಿ ‘ಮೈಸೂರು ಸಂಕ್ರಾಂತಿ ನಾಟಕೋತ್ಸವ’ ಆಯೋಜಿಸಲಾಗಿದೆ ಎಂದು ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಹೇಳಿದರು.
ಜ.13ರಂದು ಸಂಜೆ 6 ಗಂಟೆಗೆ ನಿರ್ದೇಶಕ ಬಿ.ಸುರೇಶ್ ನಾಟಕೋತ್ಸವ ಉದ್ಘಾಟಿಸುವರು, ಕನ್ನಡ ಮತ್ತು ಸಂಸ್ಕೃತ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಅಧ್ಯಕ್ಷತೆ ವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
13 ರಂದು ಕೆ.ವಿ.ಸುಬ್ಬಣ್ಣ ರಚನೆಯ ಸೂಳೆ ಸನ್ಯಾಸಿ ನಾಟಕ ಪ್ರದರ್ಶನ ನಡೆಯಲಿದೆ. ಜ.14ರಂದು ಸಂಜೆ 6 ಗಂಟೆಗೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಚನೆಯ ಕಾಕನಕೋಟೆ, 15ರಂದು ಡಾ.ಮೀರಾ ಮೂರ್ತಿ ಅನುವಾದಿಸಿರುವ ಅತೋಲ್ ಫುಗಾರ್ಡ್‌ನ ಕಣಿವೆಯ ಹಾಡು, 16ರಂದು ಪ್ರೊ.ಎಸ್.ಆರ್.ಉಮೇಶ್ ಅವರ ಅವಾರ್ಡ್ ಕ್ಯಾನ್ಸರ್ ಕಥಾನಕಗಳು, 17ರಂದು ಶ್ರೀನಿವಾಸ ವೈದ್ಯ ರಚನೆಯ ಪಾರ್ಶ್ವ ಸಂಗೀತ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ರಂಗಕರ್ಮಿಗಳಾದ ಸುರೇಶ್‌ಬಾಬು, ಸುಬ್ಬಣ್ಣ, ಹರಿದತ್ತ ಇದ್ದರು.