ಮೈಸೂರು ಪೊಲೀಸ್ ಕ್ರೀಡಾಕೂಟ : ಸಿಎಆರ್‌ಗೆ ಸಮಗ್ರ ಪ್ರಶಸ್ತಿ

Mysore Police Games Overall Award for CAR
Published on

ಮೈಸೂರು: ಮೈಸೂರು ನಗರ ಪೊಲೀಸ್ ವತಿಯಿಂದ ನಗರ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಪುರುಷರ ಸಮಗ್ರ ವಿಭಾಗದಲ್ಲಿ ಸಿಎಆರ್‌ನ ಬಿ.ಡಿ. ದಿನೇಶ್, ಮಹಿಳೆಯರ ಸಮಗ್ರ ವಿಭಾಗದಲ್ಲಿ ಎನ್.ಆರ್. ವಿಭಾಗದ ಪ್ರತೀಕ್ಷಾ ಸರ್ವೋತ್ತಮ ಪ್ರಶಸ್ತಿ ಪಡೆದರು. ಸರ್ವೋತ್ತಮ ಪ್ರಶಸ್ತಿ ಪಡೆದವರಿಗೆ ಟ್ರೋಫಿ ಹಾಗೂ ಸೈಕಲ್ ನೀಡಿ ಗೌರವಿಸಲಾಯಿತು.

ಹಗ್ಗ ಜಗ್ಗಾಟ ಪುರುಷರ ವಿಭಾಗದಲ್ಲಿ ಸಿಎಆರ್ ಪ್ರಥಮ, ಟ್ರಾಫಿಕ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಕೆ.ಆರ್.ವಿಭಾಗ ಪ್ರಥಮ, ವಿಜಯನಗರ ವಿಭಾಗ ದ್ವಿತೀಯ, ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಿಎಆರ್ ಪ್ರಥಮ, ವಿಜಯನಗರ ವಿಭಾಗ ದ್ವಿತೀಯ ಬಹುಮಾನ ಪಡೆಯಿತು.

ಪುರುಷರ ವಿಭಾಗದ 4 ್ಡ 100 ಮೀಟರ್ ರಿಲೇಯಲ್ಲಿ ಸಿಎಆರ್‌ನ ವಿನಯ್ ಶಂಕರ್, ಬಿ.ಡಿ. ದಿನೇಶ್, ಅಭಿಲಾಷ್, ಎಂ.ಜಿ. ನಾಗರಾಜ್ ತಂಡ ಪ್ರಥಮ, ಟ್ರಾಫಿಕ್‌ನ ಸಿದ್ದಾರೂಡ, ಮೈಲಾರಿ, ಪ್ರೀತಂ, ನಿತೀನ್ ತಂಡ ದ್ವಿತೀಯ ಬಹುಮಾನ ಪಡೆಯಿತು.

4 ್ಡ 400 ರಿಲೇಯಲ್ಲಿ ಸಿಎಆರ್ ನ ಅರುಣ್, ಸುನೀಲ್, ನಾಗರಾಜ್, ಕರಿಯಪ್ಪ ಬಂಡಿ ತಂಡ ಪ್ರಥಮ, ಎನ್.ಆರ್. ವಿಭಾಗದ ಶಶಾಂಕ್, ಕುಮಾರ್, ಪ್ರವೀಣ್, ರಾಕೇಶ್ ತಂಡ ದ್ವಿತೀಯ ಬಹುಮಾನ ಪಡೆದರು.

ಮಹಿಳಾ ವಿಭಾಗದ 4 ್ಡ 100 ರಿಲೇಯಲ್ಲಿ ಎನ್.ಆರ್. ವಿಭಾಗದ ಶ್ವೇತಾ, ಭಾರ್ಗವಿ, ವಿದ್ಯಾಶ್ರೀ, ಪ್ರತೀಕ್ಷಾ ತಂಡ ಪ್ರಥಮ, ವಿಜಯನಗರ ವಿಭಾಗದ ಮಂಜುಶ್ರೀ, ತನುಶ್ರೀ, ಪೂಜಾ, ಶ್ವೇತಾ ತಂಡ ದ್ವಿತೀಯ ಬಹುಮಾನ ಪಡೆದರು.

ಐಪಿಎಸ್ ಅಧಿಕಾರಿ ವಿಭಾಗದ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ನಗರ ಪೊಲೀಸ್ ಆಯುಕ ರಮೇಶ್ ಬಾನೋತ್, ರಿವಾಲ್ವರ್ ಶೂಟಿಂಗ್‌ನಲ್ಲಿ ಡಿಸಿಪಿ ಮುತ್ತುರಾಜ್ ಪ್ರಥಮ ಬಹುಮಾನ ಪಡೆದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಡಾ.ಜಿ.ಸಿ. ಪ್ರಕಾಶ್ ಬಹುಮಾನ ವಿತರಣೆ ಮಾಡಿ ಮಾತನಾಡಿ, ಜನರಿಗೆ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ಮಹತ್ವದ ಕಾರ್ಯನಿರ್ವಹಿಸುತ್ತಿದೆ. ಪೊಲೀಸರು ಸಂತಸದಲ್ಲಿರುವುದೇ ಕಡಿಮೆ, ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ರೀತಿ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ಮನಸ್ಸು ಹಗುರಗೊಳಿಸಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದರು.

ವೇದಿಕೆಯಲ್ಲಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಸಿಎಆರ್ ಡಿಸಿಪಿ ಮಾರುತಿ, ಅಶ್ವರೋಹಿ ದಳದ ಕಮಾಂಡೆಂಟ್ ಶೈಲೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net