ಮೈಸೂರು ಪೊಲೀಸರಿಂದ ನಾಲ್ವರು ಸರಗಳ್ಳರ ಬಂಧನ

Crime Logo
Published on

ಮೈಸೂರು: ನಾಲ್ವರು ಸರಗಳ್ಳರನ್ನು ಬಂಧಿಸಿರುವ ಕುವೆಂಪು ನಗರ ಠಾಣೆ ಪೊಲೀಸರು, ಎರಡು ಪ್ರಕರಣದಲ್ಲಿ 86.20 ಗ್ರಾಂ ಚಿನ್ನದ ಸರ ಹಾಗೂ ಎರಡು ಸ್ಕೂಟರ್ ಸೇರಿದಂತೆ 6.20 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಜಗನ್ಮೋಹನ ಅರಮನೆ ಬಳಿ ಅನುಮಾನಾಸ್ಪದವಾಗಿದ್ದ ಸುತ್ತುತ್ತಿದ್ದ ವ್ಯಕ್ತಿಯನ್ನು ಬಂಧಿಸಿದಾಗ ಅ.20 ರಂದು ಮಧುವನ ಲೇಔಟ್‌ನಲ್ಲಿ ಮಹಿಳೆಯಿಂದ 30 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತನಿಂದ 45 ಗ್ರಾಂ ತೂಕದ ಎರಡು ಚಿನ್ನದ ಸರಗಳು, ಸ್ಕೂಟರ್ ಸೇರಿದಂತೆ 2.80 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕುವೆಂಪುನಗರದ ಕೆಎಚ್‌ಬಿ ಕಾಲನಿಯಲ್ಲಿ ಅ.30 ರಂದು ಸಂಜೆ 6.30ರ ಸುಮಾರಿಗೆ ವೃದ್ಧೆಯೊಬ್ಬರ 11.20 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದ ಇಬ್ಬರು ಸರಗಳ್ಳರನ್ನು ಪೊಲೀಸರು ನ.1ರಂದು ಬೆಳಗ್ಗೆ ಬಂಧಿಸಿ 11.2 ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಸೇರಿದಂತೆ 1,30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಶ್ರೀರಾಂಪುರದ ಬಳಿ ಮಹಿಳೆಯ ಕುತ್ತಿಗೆಯಿಂದ ಸರ ಕಸಿದಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆತನಿಂದ 2,10 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನದ ಸರ ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net