

ಉಡುಪಿ: ಒಂದು ತಿಂಗಳ ಪರ್ಯಂತ ನಿತ್ಯ 108 ಬಾರಿ ಶ್ರೀರಾಮಜಪ ಯಜ್ಞವನ್ನು ಸಾಮೂಹಿಕವಾಗಿ ಮಾಡುವುದರಿಂದ ವೈಯುಕ್ತಿಕವಾಗಿ ರಾಮನ ಕೃಪೆಯಾಗುತ್ತದೆ. ಸಮಾಜದಲ್ಲಿರುವ ರಾವಣನಂಥ ದುಷ್ಟ ಪ್ರಭಾವಗಳು ದೂರವಾಗಿ ರಾಮನಂಥ ಸದ್ಗುಣಗಳು ಜಾಗೃತವಾಗುತ್ತವೆ. ಇಡೀ ನಾಡಿಗೆ ಮಂಗಲವಾಗುತ್ತವೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಸೋಮವಾರ ಮೈಸೂರಿನಲ್ಲಿ ಸ್ಥಳಿಯ ವಿಜಯ ವಿಠಲ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ರಾಮಜಪಯಜ್ಞ ಉದ್ಘಾಟಿಸಿ ಮಾತನಾಡಿದರು.
ಮನೆಗಳಲ್ಲಿ ಒಂದು ತಿಂಗಳು ಮಾತ್ರವಲ್ಲದೇ ಜೀವನವಿಡೀ ರಾಮನ ಸ್ಮರಣೆಯನ್ನು ಪ್ರತಿದಿನ ಕನಿಷ್ಠ್ಠ ಹತ್ತು ಬಾರಿಯಾದರೂ ಮಾಡುವಂತೆ ಮಕ್ಕಳಿಗೆ ಮಾರ್ಗದರ್ಶನಗೈದರು. 2300 ವಿದ್ಯಾರ್ಥಿಗಳಿಂದ ಸಾಮೂಹಿಕ ರಾಮಜಪಗೈದರು. ಲೋಕದ ಶಾಂತಿ ಸುಭಿಕ್ಷೆ ಸಮೃದ್ಧಿ ಸಹಿತ ಒಳಿತಿಗಾಗಿ ಪ್ರಾರ್ಥನೆ ಮಾಡಲಾಯಿತು. ವಿಜಯ ವಿಠಲ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ವಾಸುದೇವ ಭಟ್ ಉಪಸ್ಥಿತರಿದ್ದರು.