ಮೈಸೂರು ಮಹಾನಗರ ಪಾಲಿಕೆ ಅಧಿಕಾರ ಜೆಡಿಎಸ್​-ಕಾಂಗ್ರೆಸ್ ಮೈತ್ರಿ ಪಾಲು! ಬಿಜೆಪಿಯ ಕನಸು ಭಗ್ನ

13-23-20-jds-logo-congress-logo1
Published on

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಅಧಿಕಾರ ಜೆಡಿಎಸ್​-ಕಾಂಗ್ರೆಸ್ ಮೈತ್ರಿಗೆ ಒಲಿದಿದ್ದು, ಮೇಯರ್​ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ, ಉಪಮೇಯರ್ ಆಗಿ ಕಾಂಗ್ರೆಸ್​ ಅಭ್ಯರ್ಥಿ ಆಯ್ಕೆ ಆಗಿದ್ದಾರೆ. ಈ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಹಳೇ ದೋಸ್ತಿಗಳು ಒಂದಾಗಿದ್ದಾರೆ.

ಜೆಡಿಎಸ್​​ನ ರುಕ್ಮಿಣಿ ಮಾದೇಗೌಡ ಮೈಸೂರು ಪಾಲಿಕೆ ಮೇಯರ್ ಆದರೆ, ಕಾಂಗ್ರೆಸ್​ ಅನ್ವರ್​ ಬೇಗ್​ ಉಪಮೇಯರ್​ ಆಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್​ ಸದಸ್ಯರಿಂದಲೂ ಜೆಡಿಎಸ್ ಅಭ್ಯರ್ಥಿಗೆ ಸಹಕಾರ ದೊರೆತಿದ್ದು, ಬಿಜೆಪಿಯ ಮೊದಲ ಬಾರಿ ಮೇಯರ್ ಪಟ್ಟ ಅಲಂಕರಿಸೋ‌ ಆಸೆ ಭಗ್ನಗೊಂಡಿದೆ. ಅಲ್ಲದೆ, ಕಾಂಗ್ರೆಸ್​ ಜತೆ ಕೈಜೋಡಿಸಲ್ಲ ಎಂದಿದ್ದ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಇದೀಗ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಮೈತ್ರಿ ಮುಂದುವರಿಸಿದ್ದಾರೆ. ಈ ನಡೆಗೆ ಬಿಜೆಪಿ ನಾಯಕರು ಟೀಕಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net