

ಮೈಸೂರು: ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ಪ್ರೊಫೇಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ ಸಹಯೋಗದೊಂದಿಗೆ ಆ.8 ರಿಂದ 11ರವರೆಗೆ ನಗರದಲ್ಲಿ ‘ಮೈಸೂರು ಓಪನ್-2024’ ಗಾಲ್ಫ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ಡಾ. ಅಬ್ರಹಾಂ ಥಾಮಸ್ ಹೇಳಿದರು.
2022ರ ಪಿಜಿಟಿಐ ಆರ್ಡರ್ ಆಫ್ ಮೆರಿಟ್ ಚಾಂಪಿಯನ್ ಮನು ಗಂಡಾಸ್, ಮೈಸೂರಿನ ಯಶಸ್‌ಚಂದ್ರ, ಮಲ್ಟಿಪಲ್ ಇಂಟರ್‌ನ್ಯಾಷನಲ್ ವಿಜೇತ ರಾಹಿಲ್ ಗಂಗ್ಜೀ, ಒಲಿಂಪಿಯನ್ ಉದಯನ್ ಮಾನೆ, ಪ್ರಮುಖ ಗಾಲ್ಫ್ ಪಟುಗಳಾದ ಅಮನ್ ರಾಜ್, ಕರುಣ್ ಪ್ರತಾಪ್ ಸಿಂಗ್, ಸಚಿನ್ ಬೈಸೋಯಾ, ಎಂ. ಧರ್ಮ, ಅಭಿನವ್ ಮೋಹನ್, ಶ್ರೀಲಂಕಾದ ಎನ್. ತಂಗರಾಜ ಮತ್ತು ಕೆ. ಪ್ರಭಾಗರನ್, ಬಾಂಗ್ಲಾದೇಶದ ಜಮಾಲ್ ಹೊಸೈನ್ ಮತ್ತು ಮೊಹಮ್ಮದ್ ಅಕ್ಬರ್ ಹೊಸೈನ್, ಇಟಲಿಯ ಮಿಚೆಲ್ ಒರ್ಟೊಲಾನಿ, ಜೆಕಿಯಾದ ಸ್ಟೆಪನ್ ಡ್ಯಾನೆಕ್, ನೇಪಾಳದ ಸುಭಾಷ್ ತಮಾಂಗ್, ಕೆನಡಾದ ಸುಖರಾಜ್ ಸಿಂಗ್ ಗಿಲ್, ದಕ್ಷಿಣ ಕೊರಿಯಾದ ಸಿ. ಇನ್ ಕಿಮ್, ಜಪಾನಿನ ಮಕೋಟೊ ಇವಾಸಕಿ, ಅಮೆರಿಕದ ಡೊಮಿನಕ್ ಪಿಕ್ಕಿರಿಲೊ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೈಕಲ್ ಪ್ಯೂರ್ ಅಗರಬತ್ತಿಯ ಸಿಇಒ ಅರ್ಜುನ್ ರಂಗ, ಪ್ರೊಫೇಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾದ ಸಿಇಒ ಉತ್ತಮ್ ಸಿಂಗ್ ಮುಂಡಿ, ಗಾಲ್ಫ್ ಪಟುಗಳಾದ ಯಶಸ್‌ಚಂದ್ರ, ಮನು ಇದ್ದರು.