ಮೈಸೂರು: ಪ್ರಗತಿ ಪರಿವರ್ತನ ಸಂಘದ ನೂತನ ಕಚೇರಿ ಉದ್ಘಾಟನೆ

New office of Pragati Parivartan Sangha inaugurated
Published on

ಮೈಸೂರು: ಸಹಕಾರ ಸಂಘಗಳು ಉತ್ತಮವಾಗಿ ಮುನ್ನಡೆಯಲು ಸದಸ್ಯರ ಸಹಕಾರದ ಜತೆಗೆ ಉತ್ತಮ ಆಡಳಿತ ಮಂಡಳಿಯ ಅವಶ್ಯಕತೆ ಇದೆ ಎಂದು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಅಂೋಗದ ಅಧ್ಯಕ್ಷ ಟಿ.ಜಿ.ಶಿವಶಂಕರೇಗೌಡ ಹೇಳಿದರು

ನಗರದ ಮೇಟಗಳ್ಳಿಂು ಪರಿವರ್ತನ ಬಿಸಿನೆಸ್ ಸ್ಕೂಲ್ ಆವರಣದಲ್ಲಿ ಓಂ ಶ್ರೀ ನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶನಿವಾರ ಪ್ರಗತಿ ಪರಿವರ್ತನ ನಿಂುಮಿತದ ನೂತನ ಕಚೇರಿ ಉದ್ಘಾಟಿಸಿ ವಾತನಾಡಿ, ಪ್ರಸ್ತುತ ಜನರಲ್ಲಿ ಉಳಿತಾಯದ ಮನೋಭಾವನೆ ಕಡಿಮೆ ಆಗುತ್ತಿದೆ. ಜನರು ಕ್ಷಣಿಕ ಸುಖಕೋಸ್ಕರ ಹಣವನ್ನು ದುಂದುವೆಚ್ಚ ಮಾಡುತ್ತಿದ್ದಾರೆ. ಸಹಕಾರ ಸಂಘಗಳು ಜನರಲ್ಲಿ ಉಳಿತಾಯದ ಮನೋಭಾವನೆ ಬೆಳೆಸಬೇಕು ಎಂದರು.

ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳು ನಿಮ್ಮ ಊರಿಗೆ ಬಂದು ಸೇವೆ ನೀಡುವುದಿಲ್ಲ. ಆದರೆ, ಸಹಕಾರ ಸಂಘಗಳು ನಿಮ್ಮ ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತವೆ. ಹಾಗಾಗಿ ಜನರು ಸಹಕಾರ ಸಂಘಗಳನ್ನು ಬೆಳೆಸಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಸಂಘಗಳಲ್ಲಿ ಠೇವಣಿ ಇಟ್ಟು ಸಂಘವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ವಿಶ್ರಾಂತ ಕುಲಪತಿ ಡಾ.ಎನ್.ಎಸ್. ರಾಮೇಗೌಡ, ಕೂರ್ಗ್ ಪಬ್ಲಿಕ್ ಶಾಲೆಂು ಸಂಸ್ಥಾಪಕ ಪ್ರೊ ಎಂ.ಡಿ.ನಂಜುಂಡ, ಪ್ರಗತಿ ಪರಿವರ್ತನಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಡಾ ಎಂ ಪುಟ್ಟೇಗೌಡ, ಉಪಾಧ್ಯಕ್ಷ ವಿ.ನಾರಾಂುಣ, ನಿರ್ದೇಶಕರಾದ ವಿ.ಶ್ರೀನಿವಾಸ್, ಎಂ .ರಾಮಕೃಷ್ಣ, ಎಸ್.ಪಿ.ಸೋವಾಚಾರ್, ಎನ್.ಪ್ರಕಾಶ್, ಕೆ. ಗೋಪಾಲಗೌಡ ಡಿ.ಬಿ.ರುಕ್ಕಾಂಗದ, ಟಿ.ಐ.ಸೋಮಶೇಖರ್, ಪಿ.ಮನುಶ್ರೀ, ಟಿ.ಎಸ್ ಸೌಮ್ಯಶ್ರೀ, ಮುಖ್ಯಕಾಂರ್ುನಿರ್ವಹಣಾಧಿಕಾರಿ ಬಿ.ರಮೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net