ಮೈಸೂರು ಮಾದರಿಯಲ್ಲಿದೆ ಹೀರಾ ಜಂಬೂ ಸವಾರಿ

14.ktal.01
Published on

ಕವಿತಾಳ: ಹೀರಾ ಗ್ರಾಮದಲ್ಲಿ ದಸರಾ ಅಂಗವಾಗಿ ಸೋಮವಾರ ಶಾಂಭವಿ ದೇವಿಯ ಜಂಬೂಸವಾರಿ ಸಡಗರದಿಂದ ನಡೆಯಿತು. ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಜಂಬೂಸವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಿದ್ದರಾಮೇಶ್ವರ ಮಠದ ಪೀಠಾಧಿಪತಿ ಅಯ್ಯಪ್ಪ ತಾತ ಮತ್ತು ಗ್ರಾಮದ ಭಕ್ತರು ದಸರಾ ಅಂಗವಾಗಿ ಜಂಬೂಸವಾರಿ ಮತ್ತು 1008 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹೀರಾ ಜಂಬೂಸವಾರಿ ಕಾರ್ಯಕ್ರಮ ಮೈಸೂರು ಮಾದರಿಯಲ್ಲಿ ನಡೆಯುತ್ತಿದೆ ಎಂದು ಬಣ್ಣಿಸಿದರು.

ಶ್ರೀ ದೇವಿಯ ಜಂಬೂಸವಾರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಜಾ-ಭಜಂತ್ರಿ, ಕಳಸ, ಕನ್ನಡಿ ಹಾಗೂ ಡೊಳ್ಳು ಕುಣಿತದೊಂದಿಗೆ ನಡೆಯಿತು. ಮಠದ ಪೀಠಾಧಿಪತಿ ಅಯ್ಯಪ್ಪ ತಾತ ಸಾಧಕರನ್ನು ಗೌರವಿಸಿದರು. ಪ್ರಮುಖರಾದ ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ಹನುಮಂತರಾಯಗೌಡ ಹೀರಾ, ಮಲ್ಲಿಕಾರ್ಜುನ, ಧನಂಜಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net