ಶಾಸಕ ರಾಮದಾಸ್‌ಗೆ ಲಘು ಹೃದಯಾಘಾತ‌; ಖಾಸಗಿ ಆಸ್ಪತ್ರೆಯಲ್ಲಿ ಸ್ಟಂಟ್​ ಅಳವಡಿಸಿದ ವೈದ್ಯರು

S A Ramadas
Published on

ಮೈಸೂರು: ಶಾಸಕ ರಾಮದಾಸ್‌ ಅವರಿಗೆ ಲಘು ಹೃದಯಾಘಾತ‌ವಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮದಾಸ್ ಅವರಿಗೆ ವೈದ್ಯರು ಯಶಸ್ವಿಯಾಗಿ ಆಪರೇಷನ್ ಮುಗಿಸಿದ್ದಾರೆ.

ಲಘು ಹೃದಯಾಘಾತದ ಪರಿಣಾಮ ಶಾಸಕ ರಾಮದಾಸ್‌ಗೆ ಸ್ಟಂಟ್ ಅಳವಡಿಸಲಾಗಿದೆ. ತುರ್ತು ನಿಗಾ ಘಟಕದಲ್ಲಿ ರಾಮದಾಸ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಿರಿಯ ಹೃದಯ ತಜ್ಞರು, 19ಕ್ಕೂ ಹೆಚ್ಚಿನ ಸಿಬ್ಬಂದಿಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮುಂಜಾನೆ 3.15ರ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net