

ನಗರದ ಲಿಂಗಾಂಬುದಿಪಾಳ್ಯದ ಬಳಿ ದುಷ್ಕರ್ಮಿಗಳಿಬ್ಬರು ಗೂಡ್ಸ್ ಆಟೋ ತಡೆದು ನಿಲ್ಲಿಸಿ ಚಾಲಕನ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.
ನಗರದ ಲಿಂಗಾಂಬುದಿ ಪಾಳ್ಯದ ಬಳಿಯ ಕಾರ್ಲೆ ಹೆಬಿಟೇಟ್ ಬಡಾವಣೆ ನಿವಾಸಿ ನಾಣಯ್ಯ ಚಿನ್ನದ ಸರ ಕಳೆದುಕೊಂಡವರು. ಮೇ 18 ರಂದು ವ್ಯಾಪಾರ ಮುಗಿಸಿ ರಾತ್ರಿ 10 ಕ್ಕೆ ಮನೆಯ ಕಡೆ ಬರುತ್ತಿದ್ದ ಸಂದರ್ಭ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.