

ಲಿಂಗಸುಗೂರು: ಪಟ್ಟಣದಿಂದ ಮೈಸೂರಿಗೆ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಿತವಲ್ಲದ ಸ್ಲೀಪರ್ ಕೋಚ್ ಬಸ್ ಸಂಚಾರ ಆರಂಭಿಸಬೇಕೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಎಂಎಲ್‌ಸಿ ಶರಣಗೌಡ ಬಯ್ಯಪುರ ಪತ್ರ ಬರೆದು ಮನವಿ ಮಾಡಿದ್ದಾರೆ. ಲಿಂಗಸುಗೂರು ಮತ್ತು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹೆಚ್ಚಿನ ವಿದ್ಯಾರ್ಥಿಗಳು ಮೈಸೂರು ಮತ್ತು ಸುತ್ತಮುತ್ತಲಿನ ಅನೇಕ ವಿದ್ಯಾಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಸಿಂಧನೂರಿಗೆ ತೆರಳಿ ಮೈಸೂರಿಗೆ ಪ್ರಯಾಣಿಸಬೇಕಿದೆ. ವಿದ್ಯಾರ್ಥಿಗಳು, ಪಾಲಕರನ್ನೊಳಗೊಂಡಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂರು ಬಸ್ ಆರಂಭಿಸಬೇಕು. ಲಿಂಗಸುಗೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿರುವ ಹವಾನಿಯಂತ್ರಿತವಲ್ಲದ ಬಸ್‌ಗಳು ತುಂಬಾ ಹಳೆಯದಾಗಿದ್ದು, ಬದಲಾವಣೆ ಮಾಡಿ ಹವಾನಿಯಂತ್ರಿತ ಬಸ್ ಓಡಿಸಬೇಕೆಂದು ಕೋರಿದ್ದಾರೆ.