ಮೈಸೂರು: ಪತ್ನಿ ಹಂತಕನಿಗೆ ಜೀವಾವಧಿ ಶಿಕ್ಷೆ

mysoreDistCourt 4 MAR 20
Published on

ಮೈಸೂರು: ಪತ್ನಿ ಹಂತಕನಿಗೆ ನಗರದ ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ತಾಲೂಕಿನ ನಗರ್ತಹಳ್ಳಿ ನಿವಾಸಿ ರಮೇಶ ನಾಯಕ ಶಿಕ್ಷೆಗೆ ಗುರಿಯಾದ ಅಪರಾಧಿ. ಈತನಿಗೆ ಕುಡಿತದ ಚಟ ಇತ್ತು. ಕುಡಿದು ಪತ್ನಿಯೊಂದಿಗೆ ನಿತ್ಯ ಜಗಳ ಆಡಿ ಹಲ್ಲೆ ನಡೆಸುತ್ತಿದ್ದ. ಈತನಿಗೆ ಸಂಬಂಧಿಕರು ಹಾಗೂ ಅಕ್ಕಪಕ್ಕದ ಮನೆಯವರು ಸಾಕಷ್ಟು ಬುದ್ಧಿ ಹೇಳಿದರೂ ಸರಿದಾರಿಗೆ ಬರಲಿಲ್ಲ. ಈತ 25 ಫೆಬ್ರವರಿ 2021 ರಂದು ಕುಡಿದು ಪತ್ನಿಗೆ ಮಾರಕಾಯುಧದಿಂದ ಥಳಿಸಿ ಹತ್ಯೆ ಮಾಡಿದ್ದ. ಜಯಪುರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಲವರ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಎಂ.ಎಸ್.ಮಂಜುಳಾ ವಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net