

ಮೈಸೂರು: ವಕೀಲರು ಸಾಮಾನ್ಯವಾಗಿ ತಮ್ಮ ಹೆಚ್ಚಿನ ಸಮಯವನ್ನು ನ್ಯಾಯಾಲಯದ ಕಾರ್ಯಕಲಾಪ, ಕಕ್ಷಿದಾರರಿಗೆ ನ್ಯಾಯ ಒದಗಿಸಿಕೊ ಡಲು ಪ್ರಕರಣಗಳ ನಿರಂತರ ಅಧ್ಯಯನದಲ್ಲಿ ತೊಡಗುತ್ತಾರೆ. ಆದರೆ, ಶುಕ್ರವಾರ ವಕೀಲರು ಬಿಡುವು ಮಾಡಿಕೊಂಡು ‘ಸಂಪೂರ್ಣ ರಾವಾಂುಣ’ ನಾಟಕದಲ್ಲಿ ಅಭಿನಯಿಸುವ ಮೂಲಕ ಗಮನ ಸೆಳೆದರು.
ಮೈಸೂರು ವಕೀಲರ ಸಂಘ ಹಾಗೂ ಶ್ರೀ ಚಾಮುಂಡೇಶ್ವರಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಶುಕ್ರವಾರ ‘ಸಂಪೂರ್ಣ ರಾವಾಂುಣ’ ಪೌರಾಣಿಕ ನಾಟಕ ಆಯೋಜಿಸಲಾಗಿತ್ತು. ವಕೀಲರು ಬಣ್ಣ ಹಚ್ಚಿ ನಮ್ಮಳಗೊಬ್ಬ ಕಲಾವಿದ ಇದ್ದಾನೆ ಎಂದು ತೋರಿಸಿಕೊಟ್ಟರು.
ಮಧ್ಯಾಹ್ನ 12ಕ್ಕೆ ಶ್ರೀರಾಮನು ಪಟ್ಟಾಭಿಷೇಕ ವಂಚಿತನಾಗಿ ಲಕ್ಷ ್ಮಣ, ಸೀತೆಂೊಂದಿಗೆ ವನವಾಸಕ್ಕೆ ತೆರಳುವ ಪ್ರಸಂಗದಿಂದ ಆರಂಭವಾದ ನಾಟಕ, ಶ್ರೀರಾಮನು ಅಂೋಧ್ಯೆಗೆ ಬಂದು ಪಟ್ಟಾಭಿಷಿಕ್ತನಾಗುವವರೆಗೂ ರಾತ್ರಿ 9 ರವರೆಗೆ ನಿರಂತರವಾಗಿ ನಡೆಯಿತು.
ಶ್ರೀರಾಮನ ಪಾತ್ರದಲ್ಲಿ ವಕೀಲ ವಾದೇಶ್, ಲಕ್ಷ ್ಮಣನ ಪಾತ್ರದಲ್ಲಿ ಆರ್.ಮಂಜು, ಭರತನ ಪಾತ್ರದಲ್ಲಿ ಕೆ.ಎಸ್.ನಾಗರಾಜು, ಆಂಜನೇಂುನ ಪಾತ್ರದಲ್ಲಿ ಎಂ.ಎನ್.ಶ್ರೀಧರ್, ರಾವಣನ ಪಾತ್ರದಲ್ಲಿ ಕೆ.ಕೇಶವ ನಟಿಸಿದರು.
ನಾಟಕವನ್ನು ನಿರ್ದೇಶಿಸಿದ ಡ್ರಾವಾ ವಾಸ್ಟರ್ ಎಚ್.ಪಿ.ನಾಗೇಂದ್ರ ಪ್ರಸಾದ್, ಸಂಗೀತವನ್ನೂ ಸಂಂೋಜಿಸಿದ್ದರು. ನಗರದ ಶ್ರೀ ಚಾಮುಂಡೇಶ್ವರಿ ಡ್ರಾವಾ ಸೀನರಿ ತಂಡ ಭವ್ಯ ರಂಗಮಂಟಪವನ್ನು ನಿರ್ಮಿಸಿ ದೀಪಾಲಂಕಾರವನ್ನು ಅಚ್ಚುಕಟ್ಟಾಗಿ ನಿರ್ವಹಣೆ ವಾಡಿದರು.
ಇದಕ್ಕೂ ಮುನ್ನ ನಡೆದ ಸಭಾ ಕಾಂರ್ುಕ್ರಮದಲ್ಲಿ ನಾಟಕವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಂಾಧೀಶರಾದ ಉಷಾರಾಣಿ ಉದ್ಘಾಟಿಸಿದರು. ನ್ಯಾಂಾಧೀಶರಾದ ದಿನೇಶ್ ಕುವಾರ್, ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ಕಾಂರ್ುದರ್ಶಿ ಎ.ಜಿ.ಸುಧೀರ್, ರಾಜ್ಯ ವಕೀಲರ ಪರಿಷತ್ ಸದಸ್ಯ ಬಿ.ಆರ್.ಚಂದ್ರಮೌಳಿ, ಉಪಾಧ್ಯಕ್ಷರಾದ ಎಂ.ವಿ.ಚಂದ್ರಶೇಖರ್, ಬಿ.ವಿ.ವಿನೋದ ಹಾಗೂ ಇತರರು ಇದ್ದರು.