

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಹುಲಿ ಜತೆ ಫೋಸ್ ಕೊಡೋ ಫೋಟೋ ಹಾಕಿ ಟಿಪ್ಪು ವೈಭವೀಕರಣ ಮಾಡಬೇಡಿ. ಟಿಪ್ಪು ವೈಭವೀಕರಣ ನಿಲ್ಲಿಸಿ ಎಂದು ಸಂಸದ ಪ್ರತಾಪ್ ಸಿಂಹ ಟಿಪ್ಪು ವಿರುದ್ಧ ಮತ್ತೊಮ್ಮೆ ಕಿಡಿಕಾರಿದ್ದಾರೆ.
ಯಾವ ಯುದ್ದದಲ್ಲಿ ಟಿಪ್ಪು ಹೋರಾಡಿದ್ದ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಸ್ನಿಸಿದರು. ಕನ್ನಡ ಕಗ್ಗೊಲೆ ಮಾಡಿ ದ ವ್ಯಕ್ತಿಯ ಪ್ರತಿಮೆ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಕನ್ನಡ ಸಂಸ್ಕತಿ ಇಲಾಖೆ ಮೂಲಕ ಟಿಪ್ಪು ಜಯಂತಿ ಮಾಡಿಸಿದ್ದರು. ಇದು ಅರಣ್ಯ ಇಲಾಖೆಯು ವೀರಪ್ಪನ್ ಜಯಂತಿ ಮಾಡಿದಂತಾಗುತ್ತದೆ. ಟಿಪ್ಪು ಕ್ರೌರ್ಯಕ್ಕೆ ದ್ಯೋತಕವಾಗಿದ್ದಾನೆ. ಟಿಪ್ಪು ರಾಕೆಟ್ ಹಾರಿಸಲೇ ಇಲ್ಲ. ಯುದ್ಧದಲ್ಲಿ ಟಿಪ್ಪು ರಾಕೆಟ್ ಬಳಕೆ ಮಾಡಿದ ಉದಾಹರಣೆಯೇ ಇಲ್ಲ. ಕಾಗಕ್ಕ ಗುಬ್ಬಕ್ಕ ಕಥೆ ಕಟ್ಟಿ ಟಿಪ್ಪು ವೈಭವೀಕರಣ ಮಾಡಬೇಡಿ ಎಂದರು.
ಯಾವ ಹುಲಿ ಜತೆ ಟಿಪ್ಪು ಹೋರಾಟ ಮಾಡಿದ್ದಾನೆ. ಮನುಷ್ಯ ಹುಲಿ ಜತೆ ಹೋರಾಟ ಮಾಡಲು ಸಾಧ್ಯವೇ. ಹೈದರಾಲಿ ಯುದ್ಧ ಮಾಡಿದ ಉದಾಹರಣೆಯಿದೆ. ಟಿಪ್ಪು ಯಾವ ಯುದ್ಧದಲ್ಲಿ ಹೋರಾಡಿದ್ದಾನೆ. ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಮನೆಯಿಂದ ಹೊರಗಡೆಯೇ ಬರಲಿಲ್ಲ. ಕಟ್ಟುಕಥೆಗಳ ಮೂಲಕ ಟಿಪ್ಪುವನ್ನು ಕನ್ನಡದ ಹೋರಾಟಗಾರ ಎಂದು ಹೇಳುವುದನ್ನು ನಿಲ್ಲಿಸಿ ಎಂದು ಹೇಳಿದರು.
ಕೊಡವರಿಗೆ ಅಪಮಾನ ಮಾಡಿದ್ದ ಟಿಪ್ಪು. ದೇವಾಲಯಗಳ ಮೇಲೆ ದಾಳಿ ಮಾಡಿದ್ದ ಟಿಪ್ಪುವಿನ ಪ್ರತಿಮೆಗೆ ರಾಜ್ಯದಲ್ಲಿ ಅವಕಾಶವಿಲ್ಲ. ಹೀಗೇ ಬಿಟ್ಟರೆ ಮೈಸೂರನ್ನು ನಜರಾಬಾದ್, ಹಾಸನವನ್ನು ಕೈಮಾಬಾದ್ ಎಂದು ಕರೆಯಲು ಮುಂದಾಗುತ್ತಾರೆ. ವಿವೇಚನರಹಿತವಾಗಿ ಕೆಲವರು ಹೇಳಿಕೆ ನೀಡುತ್ತಿದ್ದಾರೆಂದು ಕಿಡಿಕಾರಿದರು.
ಮೂರ‌್ನಾಲ್ಕು ದಿನಗಳಲ್ಲಿ ಮೈಸೂರು ಬಸ್ ತಂಗುದಾಣದಲ್ಲಿನ ಗುಂಬಜ್ ತೆರವು ಖಂಡಿತ. ಮೈಸೂರು ಮಹಾನಗರಪಾಲಿಕೆ ತೆರವುಗೊಳಿ ಸದೇ ಇದ್ದಲ್ಲಿ ನಾನೇ ತೆರುವು ಮಾಡವೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ವಾಸ್ತುಶೈಲಿಯ ಕಟ್ಟಡಕ್ಕೂ ಗುಂಬಜ್ಗಳಿಗೂ ಸಂಬಂಧ ಕಲ್ಪಿಸಬೇಡಿ. ಕೂಡಲೇ ಗುಂಬಜ್ ಮಾದರಿಯ ಬಸ್ ತಂಗುದಾಣ ತೆರವುಗೊಳಿಸಿ. ಇದು ಪಾರಂಪರಿಕೆ ಶೈಲಿಯ ಸಂಕೇತವಲ್ಲ ಎಂದು ಕಟುವಾಗಿ ಹೇಳಿದ್ದಾರೆ.
೧೬ ರಿಂದ ೧೯ ನೇ ಶತಮಾನದವರೆಗೆ ಭಾರತದಲ್ಲಿ ಮೊಘಲರ ಆಳ್ವಿಕೆಯಿತ್ತು. ಆಗ ಇಂಡೋ ಸಾರ್ಸೇನಿಕ್ ಶೈಲಿಯ ವಾಸ್ತುಶೈಲಿ ಭಾರತ ದಲ್ಲಿತ್ತು. ಪರ್ಶಿಯಾ, ಟರ್ಕಿ, ಮೊಘಲರು ಭಾರತದ ಮೇಲೆ ದಾಳಿ ನಡೆಸಿದರು. ಭಾರತ ೧೯ನೇ ಶತಮಾನದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿತ್ತು. ಆಂಗ್ಲರ ಶೈಲಿಯ ವಾಸ್ತುಶೈಲಿ ಜಾರಿಗೆ ಬಂತು. ಹೀಗಾಗಿ ದೇಶದ ಅನೇಕ ಕಡೆ ಇಂಡೋ ಸಾರ್ಸೇನಿಕ್ ವಾಸ್ತುಶೈಲಿಯಿಂದ ಸ್ಫೂರ್ತಿ ಪಡೆದಿದೆ ಎಂದು ಪ್ರತಾಪ್ ಸಿಂಹ ಹೇಳಿದರು.