ಮೈಸೂರು ಎಲೈಟ್ ಲೇಡೀಸ್ ಕ್ಲಬ್‌ನಿಂದ ‘ಮೈಸೂರು ಕಿಡ್ಸ್‌ಥಾನ್’

Published on

ಮೈಸೂರು: ಮೈಸೂರು ಎಲೈಟ್ ಲೇಡೀಸ್ ಕ್ಲಬ್‌ನಿಂದ ನ.10ರಂದು ‘ಮೈಸೂರು ಕಿಡ್ಸ್‌ಥಾನ್’ ಓಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ಕೆ.ಆರ್.ಶ್ರೀದೇವಿ ಹೇಳಿದರು.

ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರು ವಿಶ್ವ ವಿದ್ಯಾಲಯದ ಓವಲ್ ಮೈದಾನದಲ್ಲಿ ಅಂದು ಬೆಳಗ್ಗೆ 5.30ಕ್ಕೆ ಸ್ಪರ್ಧೆ ಆರಂಭವಾಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸ್ಪರ್ಧೆಯಲ್ಲಿ 5ರಿಂದ 8, 8ರಿಂದ 12, 12 ರಿಂದ 16 ವರ್ಷದವರೆಗಿನ ಮಕ್ಕಳು ಪಾಲ್ಗೊಳ್ಳಬಹುದಾಗಿದೆ. ಕಾರ್ಯಕ್ರಮ ಹಿನ್ನೆಲೆಯಲ್ಲಿ 500 ರೂ.ಗಳ ಡೋನರ್ ಪಾಸ್ ವ್ಯವಸ್ಥೆ ಇದೆ. ಮಾಹಿತಿ ಹಾಗೂ ನೋಂದಣಿಗೆ ಮೊಬೈಲ್ 96116 83119 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಕ್ಲಬ್‌ನ ಪ್ರಿಯಾಂಕಾ ರವಿಕುಮಾರ್, ಸುನೀಲ್‌ಕುಮಾರ್, ಶಿವಸ್ವರೂಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net