‘ಹಿಂದಿ ದಿವಸ್’ ಆಚರಣೆ ವಿರೋಧಿಸಿ ಮೈಸೂರು ಕನ್ನಡ ವೇದಿಕೆ ಪ್ರತಿಭಟನೆ

mysuru kannada vedike
Published on

ಮೈಸೂರು: ರಾಜ್ಯದಲ್ಲಿ ‘ಹಿಂದಿ ದಿವಸ್’ ಆಚರಿಸುವುದನ್ನು ವಿರೋಧಿಸಿ ಮೈಸೂರು ಕನ್ನಡ ವೇದಿಕೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ರಾಜ್ಯ ಸರ್ಕಾರ ಜನರ ತೆರಿಗೆಯಿಂದ ಹಿಂದಿ ದಿವಸ್ ಆಚರಣೆ ಮಾಡುತ್ತಿರುವುದು ಖಂಡನೀಯ. ದೇಶದಲ್ಲಿ ಹಲವಾರು ಭಾಷೆಗಳಿದ್ದು, ಹಿಂದಿಯನ್ನು ಮಾತ್ರ ಮಾತನಾಡುವ ರಾಜ್ಯ ಕೇವಲ ಎರಡು ಮಾತ್ರ ಇವೆ. ಉಳಿದ ರಾಜ್ಯಗಳಲ್ಲಿ ವಿವಿಧ ಭಾಷೆಗಳನ್ನು ಜನರು ಬಳಕೆ ಮಾಡುತ್ತಾರೆ. ಆದರೆ, ಹಿಂದಿಯನ್ನು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಮೇಲೆ ಹೇರಿಕೆ ಮಾಡಲು ಹೊರಟಿರುವುದು ಖಂಡನೀಯ ಎಂದು ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ನೆಲದಲ್ಲಿ ಕನ್ನಡ ಭಾಷೆಯೇ ಕಡೆಗಣನೆಗೆ ಒಳಗಾಗುತ್ತಿದ್ದು, ಹಿಂದಿ ಭಾಷೆಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತಿದೆ. ರಾಜ್ಯದಲ್ಲಿ ಕನ್ನಡ ಮಾಧ್ಯಮದ ಹಲವಾರು ಶಾಲೆಗಳು ಮುಚ್ಚಿವೆ. ರಾಜ್ಯ ಸರ್ಕಾರ ಇನ್ನಾದರೂ ಕನ್ನಡ ಭಾಷೆ ಉಳಿವಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಎಸ್. ಬಾಲಕೃಷ್ಣ, ಬೋಗಾದಿ ಸಿದ್ದೇಗೌಡ, ಎಲ್‌ಐಸಿ ಸಿದ್ದಪ್ಪ, ಅರವಿಂದ, ರಾಧಾಕೃಷ್ಣ, ಹರೀಶ್, ಪಾಪಣ್ಣ, ಸ್ವಾಮಿ, ಬೀಡ ಬಾಬು, ಮಾದಪ್ಪ, ರಮೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net