

ಮೈಸೂರು: ಮೈಸೂರನ್ನು ಜಾಗತಿಕ ಸೈಬರ್ ಭದ್ರತೆಯ ಕೇಂದ್ರವಾಗಿ ರೂಪಿಸಲಾಗುವುದು ಎಂದು ಮೈಸೂರು ರಾಜಮನೆತನದ ತ್ರಿಷಿಕಾ ಕುಮಾರಿ ಒಡೆಯರ್ ಹೇಳಿದರು.
ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಪೂರ್ವಭಾವಿಯಾಗಿ ಸಾಂಸ್ಕೃತಿಕ ನಗರಿಯಲ್ಲಿ ಹಮ್ಮಿಕೊಂಡ ದಿ ಬಿಗ್ ಟೆಕ್ ಶೋ ಕಾರ್ಯಕ್ರಮದಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿದ ಅವರು, ನಾವು ತಂತ್ರಜ್ಞಾನ ಕ್ಷೇತ್ರದಿಂದ ಬಂದವರಲ್ಲ. ಆದರೆ, ಪತಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಸೇರಿಕೊಂಡು ಭೇರುಂಡ ಪ್ರತಿಷ್ಠಾನ ಪ್ರಾರಂಭಿಸಿ ಸೈಬರ್ ಭದ್ರತೆಯ ಉದ್ಯಮಗಳ ಸ್ಥಾಪನೆಗೆ ನೆರವಾಗುತ್ತಿದ್ದೇವೆ ಎಂದು ಹೇಳಿದರು.
ದಿ ಬಿಗ್ ಟೆಕ್ ಶೋಗೆ ತೆರೆ:
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ನವೆಂಬರ್ ಹಮ್ಮಿಕೊಂಡಿರುವ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಪೂರ್ವಭಾವಿಯಾಗಿ ಸಾಂಸ್ಕೃತಿಕ ನಗರಿಯಲ್ಲಿ ಎರಡು ದಿನಗಳ ಕಾಲ ಮೈಸೂರು ಕ್ಲಸ್ಟರ್‌ಗಾಗಿ ಹಮ್ಮಿಕೊಂಡ ದಿ ಬಿಗ್ ಟೆಕ್ ಶೋ ಗುರುವಾರ ಅರ್ಥಪೂ ರ್ಣ ತೆರೆ ಕಂಡಿತು.
ದಿ ಬಿಗ್ ಟೆಕ್ ಶೋನಲ್ಲಿ ಸುಮಾರು 400ಕ್ಕೂ ಹೆಚ್ಚು ಪ್ರತಿನಿಧಿಗಳು, 1,000ಕ್ಕೂ ಹೆಚ್ಚು ವಾಕಥಾನ್ ಸ್ಪರ್ಧಿಗಳು, 50ಕ್ಕೂ ಹೆಚ್ಚು ನವೋದ್ಯಮಗಳು, 100ಕ್ಕೂ ಹೆಚ್ಚು ಸಿಎಕ್ಸ್‌ಒಗಳು, 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು, 25ಕ್ಕೂ ಹೆಚ್ಚು ಹೂಡಿಕೆದಾರರು ಮತ್ತು ಐದು ದೇಶಗಳ ಪಾಲುದಾರರು ಪಾಲ್ಗೊಂಡು, ತಂತ್ರಜ್ಞಾನದ ಈ ಪ್ರದರ್ಶನಕ್ಕೆ ಇರುವ ಬೇಡಿಕೆಯನ್ನು ಪ್ರಸ್ತುತಪಡಿಸಿದರು.ಚ