ಮೈಸೂರು ಫೆಸ್ಟ್‌ಗೆ ರಂಗು ತುಂಬಿದ ಚಿತ್ರಕಲಾ ಸ್ಪರ್ಧೆ

mysore fest
Published on

ಮೈಸೂರು: ಪ್ರವಾಸೋದ್ಯಮ ಇಲಾಖೆ ನಗರದ ಮಾನಸಗಂಗೋತ್ರಿ ಆವರಣದಲ್ಲಿ ಹಮ್ಮಿಕೊಂಡಿರುವ ‘ಮೈಸೂರು ಫೆಸ್ಟ್-2024’ ಅಂಗವಾಗಿ ಶನಿವಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಪ್ರತಿಯೊಬ್ಬರ ಕಣ್ಮನ ತಣಿಸಿತು. ವಿದ್ಯಾರ್ಥಿಗಳು ತಮ್ಮ ಭಾವನೆಗಳಿಗೆ ಬಣ್ಣದ ಚಿತ್ತಾರ ಮೂಡಿಸಿದರು.

‘ನಮ್ಮ ಸಂಸ್ಕೃತಿ, ನಿಮ್ಮ ತಾಣ- ಮೈಸೂರು’ ಪರಿಕಲ್ಪನೆಯಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಚಿತ್ರ ಬಿಡಿಸಲು 90 ನಿಮಿಷಗಳು ಕಾಲಮಿತಿ ನಿಗದಿ ಪಡಿಸಲಾಗಿತ್ತು. ಪರಿಕಲ್ಪನೆ, ಗುಣಮಟ್ಟ, ಕೌಶಲ್ಯ ಮತ್ತು ಕಲಾತ್ಮಕತೆಯ ಆಧಾರದ ಮೇಲೆ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಲಾಯಿತು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಬೈಸಿಕಲ್ ಮತ್ತು ಟ್ರೋಫಿ ಮತ್ತು ಪ್ರಮಾಣಪತ್ರ ನೀಡಲಾಯಿತು.

ವಿಜೇತರ ವಿವರ: ನಗರದ ಬಿ.ಸಿ.ಕೃಷ್ಣ (ಪ್ರಥಮ), ಶ್ರೇಯಸ್ ಜೋಶಿ (ದ್ವಿತೀಯ), ಪ್ರಫುಲ್ ರಾಘವೇಂದ್ರ (ತೃತೀಯ), ನಿಖಿಲ್ ರಾಘವೇಂದ್ರ, ಎಂ.ಜಿ. ಪೂರ್ವಿಕಾ, ಎಂ. ಭರತ್ ಕುಮಾರ್ ಸಮಾಧಾನಕರ ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net