

ಮೈಸೂರು: ಹೆಬ್ಬಾಳ ಕೈಗಾರಿಕ ಪ್ರದೇಶದ ಮೈಸೂರು ಯೂನಿಯನ್ ಹಾಲ್‌ನಲ್ಲಿ ಡಿ.9 ರಿಂದ 11ರವರೆಗೆ ಮೈಸೂರು ಫ್ಯಾಷನ್ ವೀಕ್ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಫ್ಯಾಷನ್ ವೀಕ್ ಸಂಸ್ಥಾಪಕಿ ಜಯಂತಿ ಬಲ್ಲಾಳ್ ಹೇಳಿದರು.
ಪ್ರತಿದಿನ ಸಂಜೆ 4 ರಿಂದ ರಾತ್ರಿ 10ರವರೆಗೆ ಕಾರ್ಯಕ್ರಮ ನಡೆಯಲಿದ್ದು, ದೇಶದ ನಾನಾ ಭಾಗದಿಂದ ಖ್ಯಾತ ವಸ್ತ್ರ ವಿನ್ಯಾಸಕಾರರು ಹಾಗೂ 51 ಮಾಡೆಲ್‌ಗಳು ಭಾಗವಹಿಸಲಿದ್ದಾರೆ. ನಟಿ ಜಯಪ್ರದಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.