ರೈತರ ಸಮಸ್ಯೆ ಕುರಿತು ಸಿಎಂ ಗಮನ ಸೆಳೆದ ಮೈಸೂರು ರೈತರ ನಿಯೋಗ

WhatsApp Image 2025-09-18 at 1.37.27 PM
Published on

ಮೈಸೂರು: ಮೈಸೂರಿನ ರೈತ ಮುಖಂಡರ ನಿಯೋಗ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ರೈತರ ಸಮಸ್ಯೆ ಕುರಿತು ಗಮನ ಸೆಳೆದರು.

ರಾಜ್ಯಾದ್ಯಂತ ಇರುವ 38,000 ಕೆರೆಗಳ ಊಳು ತೆಗೆಸಿ ರೈತರ ಜಮೀನಿಗೆ ಸರಬರಾಜು ಮಾಡಲು ಯೋಜನೆಯ ರೂಪಿಸಿ ಅನುದಾನ ನಿಗದಿ ಮಾಡಬೇಕು, 2025-26ರಲ್ಲಿ ಕಬ್ಬಿನ ಉತ್ಪನ್ನ ವೆಚ್ಚ ಏರಿಕೆಯಾಗಿದ್ದು ಎಫ್‌ಆರ್‌ಪಿ ದರ ಸಮಂಜಸವಾಗಿಲ್ಲ. ಕಬ್ಬಿನ ಎಫ್‌ಆರ್‌ಪಿ ದರಕ್ಕೆ ಹೆಚ್ಚುವರಿಯಾಗಿ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ನಿಗದಿ ಮಾಡಬೇಕು. 2023-24ನೇ ಸಾಲಿನಲ್ಲಿ ಕಬ್ಬಿಗೆ ಹೆಚ್ಚುರಿಯಾಗಿ ಟನ್‌ಗೆ 150 ರೂ. ನಿಗದಿ ಪಡಿಸಲಾಗಿತ್ತು. ಈ ಹಣವನ್ನು ರೈತರಿಗೆ ಕೂಡಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮನವಿ ಮಾಡಿದರು.

ರಾಜ್ಯಾದ್ಯಂತ ಮಳೆ ಹಾನಿ ಪರಿಹಾರವನ್ನು ವೈಜ್ಞಾನಿಕವಾಗಿ ನಿರ್ಧರಿಸಿ ಮಳೆ ಆಶ್ರಿತ ಜಮೀಗೆ 25,000 ರೂ., ನೀರಾವರಿ ಜಮೀಗೆ 40,000 ರೂ. ನೀಡಬೇಕು. ಕೆಐಡಿಬಿ ರೈತರ ಜಮೀನು ವಶಪಡಿಸಿಕೊಂಡು 25 ವರ್ಷವಾದರೂ ಯಾವುದೇ ಉದ್ದೇಶಕ್ಕೆ ಬಳಸದೆ ಖಾಲಿ ಬಿಟ್ಟಿರುವ ಜಮೀನುಗಳನ್ನು ರೈತರಿಗೆ ವಾಪಸ್ ನೀಡಬೇಕು, ಭತ್ತ, ರಾಗಿ, ಜೋಳಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಖಾತ್ರಿ ಯೋಜನೆ ಜಾರಿಗೆ ತಂದಿರುವುದು ಸ್ವಾಗತಾರ್ಹ ಎಂದರು.

ಈ ಸಂದರ್ಭ ರೈತ ಮುಖಂಡರಾದ ರವಿಕುಮಾರ್, ಕರಿಬಸಪ್ಪಗೌಡ, ಅತ್ತಹಳ್ಳಿ ದೇವರಾಜ್, ಎನ್.ಎಚ್.ದೇವಕುಮಾರ್, ಬರಡನಪುರ ನಾಗರಾಜ್, ಶ್ರೀನಿವಾಸಲು, ಅಂಜನಪ್ಪ ಪೂಜಾರ್, ಬೈರಾರೆಡ್ಡಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net