

ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ರೈತ ದಸರಾ ಉಪ ಸಮಿತಿ ಹಮ್ಮಿಕೊಂಡಿರುವ ಶ್ವಾನ ಪ್ರದರ್ಶನ ಹಾಗೂ ಅಧಿಕ ಹಾಲು ಕರೆಯುವ ಸ್ಪರ್ಧೆಗಳ ಪೋಸ್ಟರ್‌ಗಳನ್ನು ಜಲದರ್ಶಿನಿ ಅತಿಥಿ ಗೃಹದಲ್ಲಿ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಬಿಡುಗಡೆ ಮಾಡಿದರು.
ನಗರದಲ್ಲಿ ಅ.6, 7 ರಂದು ಅಧಿಕ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿದ್ದು, ಈ ಬಾರಿ ಪ್ರಥಮ ಬಹುಮಾನವಾಗಿ 1 ಲಕ್ಷ ರೂ., ದ್ವಿತೀಯ 80 ಸಾವಿರ ರೂ., ತೃತೀಯ 60 ಸಾವಿರ ರೂ., ನಾಲ್ಕನೇ ಬಹುಮಾನವಾಗಿ 40 ಸಾವಿರ ರೂ. ನೀಡಲಾಗುವುದು. ಈ ಸ್ಪರ್ಧೆಗೆ ರಾಜ್ಯದ ವಿವಿಧೆಡೆಯಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅ.6 ರಂದು ಶ್ವಾನ ಪ್ರದರ್ಶನ ಏರ್ಪಡಿಸಲಾಗಿದ್ದು, ಸಾರ್ಜನಿಕರು ತಮ್ಮ ಶ್ವಾನಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.
ಈ ಸಂದರ್ಭ ರೈತ ದಸರಾ ಉಪ ಸಮಿತಿ ವಿಶೇಷಾಧಿಕಾರಿ ಡಾ.ಎಂ. ಕೃಷ್ಣರಾಜು, ಕಾರ್ಯಾಧ್ಯಕ್ಷ ಕೆ.ಜಿ. ರವಿ, ಸಹ ಕಾರ್ಯದರ್ಶಿ ಡಾ. ನಾಗರಾಜು, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಎಚ್. ಮಂಜುನಾಥ್ ಹಾಗೂ ಇತರರು ಇದ್ದರು.