ಅಧ್ಯಕ್ಷರಾಗಿ ಸಿ.ಬಿ.ಅರುಣಕುಮಾರ್ ಆಯ್ಕೆ

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ 2022-27ನೇ ಸಾಲಿನ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ಜಯಗಳಿಸಿದ ಸಿ.ಬಿ.ಅರುಣಕುಮಾರ್, ಎಸ್.ಆನಂದ, ಎಂ.ಬಸವರಾಜು, ಹೇಮಾ ಪ್ರಸಾದ್, ಎಚ್.ಎಸ್.ಮಹೇಶ್‌ಕುಮಾರ್ ಹಾಗೂ ಬಿ.ಆರ್.ಶಿವಕುಮಾರ್.
teachers election
Published on

ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಚುನಾವಣೆ


ಮೈಸೂರು:
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ತಾಲೂಕಿನ ಕಲ್ಲೂರು ನಾಗನಹಳ್ಳಿ ಪ್ರೌಢಶಾಲೆ ಶಿಕ್ಷಕ ಸಿ.ಬಿ.ಅರುಣಕುಮಾರ್ ಆಯ್ಕೆಯಾಗಿದ್ದಾರೆ.


ನಗರದ ಜೂನಿಯರ್ ಮಹಾರಾಜ ಕಾಲೇಜಿನಲ್ಲಿ ಭಾನುವಾರ ನಡೆದ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ 2022-27ನೇ ಸಾಲಿನ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ 42 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಚಲಾವಣೆಯಾದ 89 ಮತಗಳ ಪೈಕಿ ಸಿ.ಬಿ.ಅರುಣಕುಮಾರ್ 66 ಮತ ಪಡೆದಿದ್ದಾರೆ. ಇವರ ಪ್ರತಿ ಸ್ಪರ್ಧಿ ತಿ.ನರಸೀಪುರದ ಪ್ರಸಾದ್ 22 ಮತ ಪಡೆದು ಸೋಲು ಅನುಭವಿಸಿದರು. ಒಂದು ಮತ ತಿರಸ್ಕೃತಗೊಂಡಿದೆ.

ಉಳಿದಂತೆ ಉಪಾಧ್ಯಕ್ಷರಾಗಿ ವಿನಾಯಕ ನಗರ ಪ್ರೌಢಶಾಲೆಯ ಎಸ್.ಆನಂದ, ಕಾರ್ಯದರ್ಶಿಯಾಗಿ ದೇವಲಾಪುರ ಪ್ರೌಢಶಾಲೆಯ ಎಂ.ಬಸವರಾಜು, ಖಜಾಂಚಿಯಾಗಿ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಪ್ರೌಢಶಾಲೆಯ ಹೇಮಾಪ್ರಸಾದ್, ಸಹ ಕಾರ್ಯದರ್ಶಿಯಾಗಿ ತಾಂಡವಪುರ ಪ್ರೌಢಶಾಲೆಯ ಎಚ್.ಎಸ್.ಮಹೇಶ್‌ಕುಮಾರ್ ಆಯ್ಕೆಯಾಗಿದ್ದಾರೆ. ಅಂತೆಯೇ ಮರಿಮಲ್ಲಪ್ಪ ಪ್ರೌಢಶಾಲೆಯ ಬಿ.ಆರ್.ಶಿವಕುಮಾರ್ ಸಂಘಟನಾ ಕಾರ್ಯದರ್ಶಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net