ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ

16
Published on

ಮೈಸೂರು: ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆಗೆ 2024-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಎನ್.ಎಂ. ಸುಮನಾ ಆಯ್ಕೆಯಾಗಿದ್ದಾರೆ.

ಈಚೆಗೆ ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಎಂ. ಯೋಗೇಂದ್ರ, ಕೆ.ಎನ್. ಸೋಮಶೇಖರ್, ಕೆ.ಎಸ್.ಪಾರ್ವತಿ, ಮಹದೇವಯ್ಯ ಆಯ್ಕೆಯಾದರು.

ಸಿ.ಎನ್. ಗಣೇಶ್(ಕಾರ್ಯದರ್ಶಿ), ಎಸ್.ಮಹದೇವು (ಖಜಾಂಚಿ), ಸಿ.ಕೆ.ಮುರಳೀಧರನ್(ಮುಖ್ಯ ಸಂಯೋಜಕ), ಚಂದ್ರಶೇಖರ ( ಸಂಘಟನಾ ಕಾರ್ಯದರ್ಶಿ), ಎಸ್.ಬಸವರಾಜು, ಬಿ.ಎಸ್. ಜಯಶ್ರೀ, ಎಂ.ಎಲ್. ಅಶೋಕ ( ಜಂಟಿ ಕಾರ್ಯದರ್ಶಿಗಳು) ಹಾಗೂ ಸಮಿತಿ ಸದಸ್ಯರಾಗಿ ಚಿ. ಚೆನ್ನಯ್ಯ, ಬಿ.ಕೆ. ಸೋಮಶೇಖರ್, ಬಿ.ಆರ್.ರಾಣಿ, ಎಂ.ಎಂ.ನಾಣಯ್ಯ, ಎಂ.ಎಸ್. ಮಹೇಶ್ ಆಯ್ಕೆಯಾದರು ಎಂದು ಪ್ರಕಟಣೆಯು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net