ಯುವ ಸಂಭ್ರಮದಲ್ಲಿ ಮಿಂದೆದ್ದ ಯುವಜನ

mysore dasara yuva sambhrama 1
Published on

ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ಮಾನಸಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡ ‘ಯುವ ಸಂಭ್ರಮ’ದ ಮೂರನೇ ದಿನ ಕಾರ್ಯಕ್ರಮದಲ್ಲಿ ಯುವಜನರು ಸಂಭ್ರಮಿಸಿದರು. ಮತ್ತೊಂದೆಡೆ ನಟ ಪುನೀತ್ ರಾಜ್ ಕುಮಾರ್ ನೆನದು ಭಾವುಕರಾದರು.

ನಗರದ ಜಯಲಕ್ಷ್ಮೀಪುರಂನ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಅಪ್ಪು ಕುರಿತು ಮಾಡಿದ ನೃತ್ಯಕ್ಕೆ ಮನಸೋತ ಯುವಜನರು ಮೊಬೈಲ್ ಟಾರ್ಚ್ ಆನ್ ಮಾಡುವ ಮೂಲಕ ಅಪ್ಪುವಿಗೆ ವಿಶೇಷ ಗೌರವ ನಮನ ಸಲ್ಲಿಸಿದರು. ಇಷ್ಟು ಮಾತ್ರ ವಲ್ಲದೆ ವಿವಿಧ ಕಾಲೇಜುಗಳ ತಂಡಗಳು ಪ್ರದರ್ಶಿಸಿದ ನೃತ್ಯಗಳಲ್ಲಿ ಅಪ್ಪು ಭಾವಚಿತ್ರ ಎಲ್‌ಇಡಿ ಪರದೆ ಮೇಲೆ ಕಂಡು ಬಂದಾಗ ಜರ ಹರ್ಷೋದ್ಘಾರ ಮುಗಿಲು ಮುಟ್ಟಿತು.

ನಾಲ್ವಡಿಯನ್ನು ನೆನೆದ ಯುವಮನ:
ನವ ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಯನ್ನು ವಿವಿಧ ಕಾಲೇಜು ತಂಡದ ವಿದ್ಯಾರ್ಥಿ ಗಳು ನೃತ್ಯದ ಮೂಲಕ ನೆನೆದರು. ಮೈಸೂರು ಮಹಾರಾಜ ಕಾಲೇಜು, ಪಾಂಡವಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಳ್ಳೇಗಾಲ ಯದ ಜೆಎಸ್‌ಎಸ್ ಮಹಿಳಾ ಕಾಲೇಜು ವಿದ್ಯಾರ್ಥಿಗಳು ನಾಲ್ವಡಿ ಹಾಗೂ ಮೈಸೂರು ರಾಜಮನೆತನಕ್ಕೆ ಸಂಬಂಧಿಸಿದ ನೃತ್ಯದ ಮೂಲಕ ಗಮನ ಸೆಳೆದರು.

ನೃತ್ಯ ಪ್ರದರ್ಶಿಸಿದ ತಂಡಗಳು:
ಬಿಳಿಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬನ್ನೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಡುವಾರಹಳ್ಳಿ ಮಹಾರಾಣಿ ಮಹಿಳಾ ಮತ್ತು ನಿರ್ವಹಣಾ ಕಾಲೇಜು, ಕೊಳ್ಳೇಗಾಲದ ಜೆಎಸ್‌ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜು, ಮದ್ದೂರಿನ ಭಾರತೀ ಕಾಲೇಜ್ ಆಫ್ ಫಾರ್ಮಸಿ, ಸರಸ್ವತಿಪುರಂನ ಜ್ಞಾನೋದಯ ಪ.ಪೂ. ಕಾಲೇಜು, ಸೋಮವಾರಪೇಟೆಯ ಬಿ.ಟಿ. ಚೆನ್ನಯ್ಯ ಗೌರಮ್ಮ ಪ.ಪೂ. ಕಾಲೇಜು, ಕೃಷ್ಣರಾಜಪೇಟೆ ಬಲ್ಲೇನಹಳ್ಳಿ ಸರ್ಕಾರಿ ಪ.ಪೂ. ಕಾಲೇಜು, ನಂದಿಪುರದ ಶ್ರೀ ಸದಾಶಿವಸ್ವಾಮೀಜಿ ಸಂಯುಕ್ತ ಪ.ಪೂ. ಕಾಲೇಜು, ಮೇಟಗಳ್ಳಿಯ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆ, ನಗರದ ಟೆರಿಷಿಯನ್ ಕಾಲೇಜು, ಮಳವಳ್ಳಿಯ ಶಾಂತಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಕುವೆಂಪುನಗರದ ಜೆಎಸ್‌ಎಸ್ ಕಾನೂನು ಕಾಲೇಜು ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.

ಗುಂಡ್ಲುಪೇಟೆ ಹಂಗಳ ಸರ್ಕಾರಿ ಪ.ಪೂ. ಕಾಲೇಜು, ದೊಡ್ಡಮಾರಗೌಡನಹಳ್ಳಿ ಜವಾಹರ್ ನವೋದಯ ವಿದ್ಯಾಲಯ, ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶಿಕ್ಷಣ ಮಹಾವಿದ್ಯಾಲಯ, ಪೀಪಲ್ಸ್‌ಪಾರ್ಕ್ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜು, ನಗರದ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜು, ಪಾಂಡವಪುರ ಬನ್ನಂಗಾಡಿ ಸರ್ಕಾರಿ ಪ.ಪೂ. ಕಾಲೇಜು, ಹೊಳೆನರಸಿಪುರ ಸರ್ಕಾರಿ ಹೋಮ್ ವಿಜ್ಞಾನ ಮಹಿಳಾ ಕಾಲೇಜು, ಅರಕಲಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ನೃತ್ಯದ ಮೂಲಕ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net