ಮುಂದಿನ ಬಾರಿ ವಿಜೃಂಭಣೆಯಿಂದ ದಸರಾ ಆಚರಣೆ: ಸಿಎಂ ಬಿಎಸ್​ವೈ

Dasara
Published on

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಿಎಂ ಬಿ.ಎಸ್.ಯಡಿಯೂರಪ್ಪ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ನಂಧಿ ಧ್ವಜಕ್ಕೆ ಪೂಜೆ ಸಲ್ಲಿಸಲಿಸಿದ ಯಡಿಯೂರಪ್ಪ, ಪುಷ್ಪಾರ್ಚನೆ ಮೂಲಕ ನಾಡಿನ ಅಧಿದೇವತೆಗೆ ಗೌರವ ವಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಿಎಂ, ಕರೊನಾ ಕಾರಣದಿಂದ ಸರಳವಾಗಿ ದಸರಾ ಆಚರಣೆ ಮಾಡುತ್ತಿದ್ದೇವೆ. ಮುಂದಿನ ಬಾರಿ ವಿಜೃಂಭಣೆಯಿಂದ ದಸರಾ ಆಚರಿಸಲಾಗುವುದು ಎಂದರು.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರಿ ಜನಸ್ತೋಮವಿಲ್ಲದೆ ಮೈಸೂರು ದಸರಾ ನಡೆಯುತ್ತಿದೆ. ವಿಜಯಯಾತ್ರೆ ಮುಗಿಯುತ್ತಿದ್ದಂತೆ ಹಸುಗಳು ಬೆಚ್ಚಿದ ಘಟನೆ ನಡೆಯಿತು. ಪಲ್ಲಕ್ಕಿಗೆ ಕಟ್ಟಲಾಗಿದ್ದ ಹಸುಗಳು ಓಲಗದ ಸದ್ದಿಗೆ ಬೆದರಿದವು. ಆನೆಗಳು ಕೂಡ ಕೂಗು ಹಾಕಿ‌ ಸದ್ದು ಮಾಡಿದವು. ಕೊನೆಗೆ ಹಸುಗಳಿಲ್ಲದೆ ಜನರೇ ಪಲ್ಲಕ್ಕಿ ಎಳೆದು ಮೆರವಣಿಗೆ ನಡೆಸಿದರು. ಬನ್ನಿ ವೃಕ್ಷಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಪೂಜೆ ಸಲ್ಲಿಸಿದರು.

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲೂ ದಸರಾ ಜಾತ್ರಾ ಮಹೋತ್ಸವ ಸರಳವಾಗಿ ನಡೆಯುತ್ತಿದೆ. ಸಾಂಪ್ರದಾಯಿಕ ವಿಧಿವಿಧಾನಗಳಿಗಷ್ಟೇ ಈ ಭಾರಿಯ ಮಹೋತ್ಸವ ಸೀಮಿತವಾಗಿದೆ. ಮೈಸೂರು ಮಹಾರಾಜರು ನೀಡಿರುವ ವಜ್ರವೈಢೂರ್ಯಗಳೊಂದಿಗೆ ಮಹದೇಶ್ವರನಿಗೆ ಅಲಂಕರಿಸಿ ವಿಜಯದಶಮಿ ಪೂಜೆ ಮಾಡಲಾಗುತ್ತಿದೆ. ದೇವಾಲಯದ ಒಳಾವರಣದಲ್ಲಿ ಉಯ್ಯಾಲೋತ್ಸವ, ರುದ್ರಾಕ್ಷಿ ಮಂಟಪ ಹಾಗೂ ಬಸವ ವಾಹನ ಸಮೇತ ಚಿನ್ನದ ರಥೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net